ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ, ಮಹಾಶಿವರಾತ್ರಿ ಮಹೋತ್ಸವ

0

ಪುತ್ತೂರು: ಶಿವನ ಐದು ಮುಖ, ಐದು ರೂಪಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಈ ಐದು ಲಿಂಗಗಳು ಶಿವನ ಐದು ಮುಖಗಳನ್ನು ಐದು ರೂಪಗಳನ್ನು ಪ್ರತಿನಿಧಿಸುವ ಈಶ್ವರಮಂಗಲದ ಶಿವ ದೇವಾಲಯ ಕೂಡ ಪಂಚಲಿಂಗೇಶ್ವರ ದೇವಾಲಯವಾಗಿದೆ.ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಫೆ.26ರಂದು ಮಹಾಶಿವರಾತ್ರಿ ಮಹೋತ್ಸವ ಜರಗಿತು.

ಬೆಳಿಗ್ಗೆ ನಿತ್ಯ ಬಲಿ, ಏಕಾದಶ ರುದ್ರಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ ಬಳಿಕ ಶಿವನಿಗೆ ಮಹಾಶಿವರಾತ್ರಿ ಮಹೋತ್ಸವ ಜರಗಿತು. ನೂರಾರು ಭಕ್ತಾಧಿಗಳು ಮಹಾಶಿವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾದರು.

ಸೂರ್ಯಾಸ್ತದಿಂದ ಪ್ರಾರಂಭಗೊಂಡು ಮರುದಿನ ಸೂರ್ಯೋದಯದ ತನಕ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ತಂಡದಲ್ಲಿ ಈಶ್ವರಮಂಗಲ ಶ್ರೀ ಗಜಾನನ ಹಿ.ಪ್ರಾ.ಶಾಲಾ ಅಧ್ಯಾಪಕ ಮತ್ತು ವಿದ್ಯಾರ್ಥಿ ವೃಂದ, ಮಯ್ಯಾಳ ಶ್ರೀ ಸತ್ಯನಾರಾಯನ ಭಜನಾ ಮಂದಿರ, ಕರ್ನೂರು ಸ.ಹಿ.ಪ್ರಾ.ಶಾಲೆ,ಪರಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕಾವು ಶ್ರೀಪಂಚಲಿಂಗೇಶ್ವರ ಭಜನಾ ಸಂಘ, ಪಡುಮಲೆ ಶ್ರೀ ಕೂವೆಶಾಸ್ತಾರ ಸಾಂಸ್ಕೃತಿಕ ಸೇವಾ ಸಮಿತಿ, ಮೇನಾಲ ಶ್ರೀ ಮಾರಿಯಮ್ಮ ಭಜನಾ ಸಂಘ, ಮಣಿಯೂರು ಶ್ರೀ ಧರ್ಮಶಾಸ್ತಾರ ಭಜನಾ ಮಂಡಳಿ, ಮಯ್ಯಾಳ ಶ್ರೀ ಮೂಕಾಂಬಿಕಾ ಭಜನಾ ಸಂಘ, ಸಜಂಕಾಡಿ ಶ್ರೀ ಮಾರಿಯಮ್ಮ ದೇವಿ ಮತ್ತು ಪರಿವಾರ ದೈವಗಳ ಕ್ಷೇತ್ರ, ಕಲ್ಲಾಜೆ ಕರ್ನೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಒಡಿಯೂರು ಶ್ರೀ ಗುರುದೇವ ಭಜನಾ ಸಂಘ ಈಶ್ವರಮಂಗಲ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ, ಪಂಚಶ್ರೀ ಮಹಿಳಾ ಭಜನಾ ತಂಡ ಈಶ್ವರಮಂಗಲ ಈ ಭಜನಾ ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here