ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ಮಾ.1ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
34 ನೆಕ್ಕಿಲಾಡಿ ಗ್ರಾ.ಪಂ.ನ ಎರಡು ಕೊಳವೆ ಬಾವಿಗಳಿಂದ ಗ್ರಾಮಸ್ಥರಿಗೆ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಗ್ರಾಮದ ಕೆಲವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ಆರೋಪಿಸಿರವ ನೆಕ್ಕಿಲಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಹೋರಾಟ ಮಾಡುತ್ತಿರುವವರು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿ ಗ್ರಾಮ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಬೇಕೆಂದು ಕೇಳಿಕೊಂಡಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಗ್ರಾಮ ನಿವಾಸಿಗಳ ಸಮೀಕ್ಷೆ ನಡೆಸಿದ್ದು, ಕೆಲವರಲ್ಲಿ ರೋಗಗಳು ಕಂಡು ಬಂದಿದ್ದರಿಂದ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಶಿಬಿರದಲ್ಲಿ ಸ್ತ್ರಿ ರೋಗ ತಜ್ಞರು, ಪಿಜಿಷಿಯನ್, ಚರ್ಮ ರೋಗ ವಿಭಾಗ, ಮೂಳೆ ರೋಗ ವಿಭಾಗ ಹಾಗೂ ಮಕ್ಕಳ ವಿಭಾಗದ ತಜ್ಞರು ಲಭ್ಯವಿದ್ದು, ಆರೋಗ್ಯ ತಪಾಸಣೆಗೆ ಬರುವವರು ಆಧಾರ್ ಕಾರ್ಡ್‌ನೊಂದಿಗೆ ಬರಬೇಕೆಂದು ಪ್ರಕಟನೆ ತಿಳಿಸಿದೆ.