ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿಯ ರೂಬಿ ಟವರ್ಸ್ನಲ್ಲಿ ನೀಲಂ ವೆಡ್ಡಿಂಗ್ ಶೋರೂಂ ಮಾ.1ರಂದು ಬೆಳಗ್ಗೆ ಶುಭಾರಂಭಗೊಳ್ಳಲಿದೆ. ರಾಕೇಶ್ ಅಂಜನ ಕಲ್ಬಿ ಮಾಲಕತ್ವದ ಈ ಜವುಳಿ ಶೋ ರೂಮ್ ನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಾಜಿ ಶಾಸಕ ಸಂಜೀವ ಮಠಂದೂರ್ ಹಾಗೂ ಕಟ್ಟಡ ಮಾಲಕ ಕೆ.ಎಂ. ಅಬ್ದುಲ್ಲ ಕುಂಞಿ ಆಗಮಿಸಲಿದ್ದಾರೆ.