ಲಯನ್ಸ್ ಕ್ಲಬ್ ಪುತ್ತೂರು: ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ

0

ಪುತ್ತೂರು: ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲ/ಪಾವನರಾಮ್ ಪಿ.ಎಮ್.ಜೆ.ಎಫ್ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಲಯನ್ಸ್ ಕ್ಲಬ್ ಪುತ್ತೂರಿನ ಅಧ್ಯಕ್ಷೆ ಲಯನ್ ಪ್ರೇಮಲತಾ ರಾವ್‌ರವರ ಅಧ್ಯಕ್ಷತೆಯಲ್ಲಿ ಫೆ.25 ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ವೇದಿಕೆಯಲ್ಲಿ ವಲಯ ಅಧ್ಯಕ್ಷ ಲಯನ್ ಸುದೇಶ್ ಭಂಡಾರಿ, ಪಿ.ಎಮ್.ಜೆ.ಎಫ್, ರೀಜನ್ ಅಂಬಾಸಿಡರ್ ಲಯನ್ ಲ್ಯಾನ್ಸಿ ಮಸ್ಕರೇನಶ್, ಎಮ್.ಜೆ ಎಫ್, ನಿಕಟಪೂರ್ವ ಅಧ್ಯಕ್ಷರಾದ ಲಯನ್ ಟಿ. ಸದಾಶಿವ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಗೆ ಹೊಸ ಸದಸ್ಯರಾಗಿ ಎಲೈಸಿ ನಿವೃತ ಅಧಿಕಾರಿ ಬಾಬು ನಾಯ್ಕ್ ರವರು ಸೇರ್ಪಡೆಗೊಂಡರು. ಲಯನ್ ನಾರಯಣ ಗೌಡ ರವರು ಹೊಸ ಸದಸ್ಯರ ಪರಿಚಯವನ್ನು ಸಭೆಗೆ ಮಾಡಿದರು. ಪ್ರಾಂತೀಯ ಅಧ್ಯಕ್ಷರು ಪ್ರಮಾಣವಚನ ಭೋಧಿಸಿದರು. ಈ ಸಂದರ್ಭದಲ್ಲಿ ಸೇವಾ ಕಾರ್ಯಕ್ರಮಗಳಾಗಿ ಪುತ್ತೂರು, ಸಂಜಯನಗರ ಸರಕಾರಿ ಪ್ರಾಥಾಮಿಕ ಶಾಲೆಯ ಮಕ್ಕಳಿಗೆ ಚಯರ್ಸ್ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಗೆ ವೀಲ್ ಚಯರ್ ವಿತರಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಜಗದೀಶ್ ಶೆಟ್ಟಿ, ನೆಲ್ಲಿಕಟ್ಟೆ ಇವರ ಪುತ್ರಿ ಸಮೃದ್ದಿ ಶೆಟ್ಟಿ, ಉರಗತಜ್ಞ ತೇಜಸ್, ಪುತ್ತೂರು ಕೋ-ಒಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಗೊಂಡ ನ್ಯಾಯಾವಾದಿ ಲಯನ್ ಕಿಶೋರ್ ಕೊಳತ್ತಾಯ ಇವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಲಯನ್ ಅರವಿಂದ ಭಗವಾನ್ ರೈ ರವರು ಜುಲೈ 2024 ರಿಂದ ಈವರೇಗಿನ ಸೇವಾ ವರದಿಯನ್ನು ವಾಚಿಸಿದರು.

ಲಯನ್ ಕೃಷ್ಣ ಪ್ರಶಾಂತ್, ಪಿ.ಎಮ್.ಜೆ.ಎಫ್, ಪ್ರಾಂತೀಯ ಅಧ್ಯಕ್ಷರ ಪರಿಚಯವನ್ನು ಸಭೆಗೆ ಮಾಡಿದರು. ಲಯನ್ ವತ್ಸಲಾ ರಾಜ್ನಿ, ಲಯನ್ ಆನಂದ ರೈ, ಲಯನ್ ಆನಂದ ಆಚಾರ್ಯ ಲಯನ್ ಗಣೇಶ್ ಶೆಟ್ಟಿ, ಲಯನ್ ಶಿವಪ್ರಸಾದ ಶೆಟ್ಟಿ ಲಯನ್ ಡಾ ಸತೀಶ್ ರಾವ್ ಸಹಕರಿಸಿದರು. ಕೋಶಾಧಿಕಾರಿ ಲಯನ್ ಸುಧಾಕರ ಕೆ.ಪಿ ವಂದಿಸಿದರು.

LEAVE A REPLY

Please enter your comment!
Please enter your name here