ಕಡಬ: ಕಡಬ ಬೆಥನಿ ಜೀವನ್ ಜ್ಯೋತಿ ವಿಶೇಷ ಮಕ್ಕಳ ಶಾಲೆಯಲ್ಲಿ ವಿಕಲಚೇತನ ಇಲಾಖೆ ವತಿಯಿಂದ ಮಾಹಿತಿ ಶಿಬಿರ ಫೆ.24ರಂದು ನಡೆಯಿತು.

10 ವಿಶೇಷ ಮಕ್ಕಳ ಶಿಕ್ಷಕರು ಸೇರಿದಂತೆ ಸುಮಾರು 80 ವಿಶೇಷ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಕಡಬ ತಾಲೂಕು ಪ್ರಭಾರ ವಿಶೇಷ ಚೇತನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಪೆರಾಬೆ ವಿಶೇಷ ಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಗೌಡ, ಮರ್ದಾಳ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಾಂತ ಸಿ ಎಚ್, ನೂಜಿ ಬಾಳ್ತಿಲದ ಪುನರ್ವಸತಿ ಕಾರ್ಯಕರ್ತ ಸಜಿತ್ ಪಿ ಸಿ, ಆಲಂಕಾರು ಪುನರ್ವಸತಿ ಕಾರ್ಯಕರ್ತ ಮೋನಪ್ಪ ಬಿ, ಸವಣೂರು ಕಾರ್ಯಕರ್ತೆ ದೀಪಿಕಾ ಎಂ, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು.