ಕಾಣಿಯೂರು ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

0

ಕಾಣಿಯೂರು: ಸ. ಹಿ.ಪ್ರಾ.ಶಾಲೆ ಕಾಣಿಯೂರು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಶಾಲಾ ವಿದ್ಯಾರ್ಥಿ ನಾಯಕ ಮಾ. ಗೌತಮ್ ಉದ್ಘಾಟಿಸಿದರು. ಶಾಲಾ ಮುಖ್ಯಗುರು ಬಾಲಕೃಷ್ಣ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಮಕ್ಕಳಿಗೆ ದಿನದ ಮಹತ್ವವನ್ನು ವಿವರಿಸಿ ಹೇಳಿದರು. ಬಳಿಕ ವಿದ್ಯಾರ್ಥಿಗಳು, ತಾವೇ ತಯಾರಿಸಿದ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅದರಲ್ಲಿ ಮುಖ್ಯವಾಗಿ ಜ್ವಾಲಾಮುಖಿ, ಪ್ರಯೋಗ ಬಹಳ ಅತ್ಯುತ್ತಮವಾಗಿತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಿನದ ” ಪ್ರತಿಜ್ಞಾ ವಿಧಿ ” ಮಾಡಿದರು. ಶಾಲಾ ವಿದ್ಯಾರ್ಥಿನಿ ಮನಸ್ವಿ ಪ್ರತಿಜ್ಞಾ ವಿಧಿ ಬೋಧಿಸಿದಳು. ಶಾಲಾ ಶಿಕ್ಷಕರಾದ ದೇವಕಿ ಪಿ, ಸುಜಯ, ಭಾರತಿ, ಶೇರಿನಾ ಬೇಗಂ,ದಿವ್ಯ, ಸವಿತಾ, ಚೈತನ್ಯ ಮತ್ತು ನಯನ ಪ್ರಭು ಉಪಸ್ಥಿತರಿದ್ದರು. ಸವಣೂರು ಸಿ ಆರ್ ಪಿ ಜಯಂತ ವೈ ಭೇಟಿ ನೀಡಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here