ಮರ್ದಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಕಾರ್ಯಕರ್ತರ ಭೇಟಿ

0

ಕಡಬ: ಮರ್ದಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಕಡಬ ತಾಲೂಕು ಎಂಆರ್‌ಡಬ್ಲ್ಯು ಹಾಗೂ ವಿಆರ್‌ಡಬ್ಲ್ಯು ಕಾರ್ಯಕರ್ತರು ಭೇಟಿ ನೀಡಿ ವಿಶೇಷ ಅಗತ್ಯವುಳ್ಳ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.


ಕಡಬ ತಾ.ಪಂ.ಪ್ರಭಾರ ವಿಶೇಷ ಚೇತನರ ವಿವಿಧೋದ್ದೇಶ ಪುನರ್‌ವಸತಿ ಕಾರ್ಯಕರ್ತ ನವೀನ್ ಕುಮಾರ್, ಪೆರಾಬೆ ಗ್ರಾ.ಪಂ.ವಿಶೇಷ ಚೇತನರ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ಮುತ್ತಪ್ಪ ಗೌಡ, ಮರ್ದಾಳ ಗ್ರಾ.ಪಂ.ವಿಶೇಷ ಚೇತನರ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತೆ ಶಾಂತ ಸಿ.ಎಚ್., ನೂಜಿಬಾಳ್ತಿಲ ಗ್ರಾ.ಪಂ.ವಿಶೇಷಚೇತನರ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ಸಜಿತ್ ಪಿ.ವಿ., ಆಲಂಕಾರು ಗ್ರಾ.ಪಂ.ವಿಶೇಷಚೇತನರ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ಮೋನಪ್ಪ ಬಿ., ಸವಣೂರು ಗ್ರಾ.ಪಂ.ವಿಶೇಷ ಚೇತನರ ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತೆ ದೀಪಿಕಾ ಎಂ.,ರವರು ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಿದರು.


ಬೆಥನಿ ವಿಶೇಷ ಶಾಲೆಯ ಶಿಕ್ಷಕರಿಗೆ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಎಂಆರ್‌ಡಬ್ಲ್ಯು ನವೀನ್ ಕುಮಾರ್‌ರವರು ಯೋಜನೆಗಳ ಕುರಿತು ಮಾಹಿತಿ ನೀಡಿದರು. 10 ಮಂದಿ ಶಿಕ್ಷಕರು, 80 ಮಂದಿ ವಿಶೇಷ ಅಗತ್ಯವುಳ್ಳ ಮಕ್ಕಳು ಉಪಸ್ಥಿತರಿದ್ದರು. ಪೆರಾಬೆ ಗ್ರಾ.ಪಂ.ಗ್ರಾಮೀಣ ವಿಶೇಷಚೇತನರ ಪುನರ್‌ವಸತಿ ಕಾರ್ಯಕರ್ತ ಮುತ್ತಪ್ಪ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here