ಧರ್ಮಸ್ಥಳಕ್ಕೆ ಗಂಗಾಜಲ ಅರ್ಪಿಸಿದ ಪೆರ್ಲಂಪಾಡಿಯ ಮಹೇಶ್ ಗೌಡ ದಂಪತಿ

0

ಪುತ್ತೂರು: 144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮಹೇಶ್ ಗೌಡ ದಂಪತಿಗಳು ತ್ರಿವೇಣಿ ಸಂಗಮದ ಪವಿತ್ರ ಗಂಗಾಜಲವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೂಲಕ ಕ್ಷೇತ್ರಕ್ಕೆ ಅರ್ಪಿಸಿಸಿದ್ದಾರೆ.


ಕುಂಭ ಮೇಳದಲ್ಲಿ ಭಾಗವಹಿಸಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಡಾ. ಮಹೇಶ್ ಗೌಡ ಅವರು ಮೂಲತಃ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದವರಾಗಿದ್ದಾರೆ. ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅವರು ಅಲ್ಲಿಂದ ಪವಿತ್ರ ಗಂಗಾಜಲವನ್ನು ತಂದು ಹಾಸನದಿಂದ ಸುಮಾರು 125 ಕಿ ಮೀ ದೂರ ಕಾಲ್ನಡಿಗೆಯ ಮೂಲಕ ಪಕ್ಷದ ಸುಮಾರು 250 ಕಾರ್ಯಕರ್ತರ ಜೊತೆ ತೆರಳಿ ಧರ್ಮಾಧಿಕಾರಿಯವರಿಗೆ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ಜಿಲ್ಲೆಯಿಂದ ಸಾವಿರಾರು ಭಕ್ತರೊಂದಿಗೆ ಕುಂಭಮೇಳಕ್ಕೆ ತೆರಳಿದ್ದ ನಾವು ಪವಿತ್ರ ಗಂಗಾಜಲವನ್ನು ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಅರ್ಪಿಸುವ ಮೂಲಕ ಪುನೀತರಾಗಿದ್ದೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here