ನೇರಳಕಟ್ಟೆ ಗಣೇಶ್‌ ನಗರದಲ್ಲಿ ಭಾರತ್ ಸೇವಾ ಕೇಂದ್ರ ಶುಭಾರಂಭ

0

ಪುತ್ತೂರು: ಮಾಣಿ ಸಮೀಪದ ನೇರಳಕಟ್ಟೆ ಗಣೇಶ್‌ನಗರದಲ್ಲಿ ವಾಯುಮಾಲಿನ್ಯ ತಪಾಸಣಾ ಕೇಂದ್ರ, ವೆಹಿಕಲ್ ಇನ್ಸೂರೆನ್ಸ್ ಹಾಗೂ ಡಿಜಿಟಲ್ ಸೇವೆಯನ್ನೊಳಗೊಂಡ ‘ಭಾರತ್ ಸೇವಾ ಕೇಂದ್ರ’ ಫೆ.28ರಂದು ಶುಭಾರಂಭಗೊಂಡಿತು.


ಸೈಯ್ಯದ್ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು. ಸಂಸ್ಥೆಯನ್ನು ಉದ್ಘಾಟಿಸಿದ ಪುತ್ತೂರು ಬ್ಯಾಂಕ್ ಆಫ್ ಬರೋಡಾದ ಚೀಫ್ ಮ್ಯಾನೇಜರ್ ಸಾದಿಕ್ ಎಸ್.ಎಂ ಮಾತನಾಡಿ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಸೇವೆ ನೀಡಿದಾಗ ಯಾವುದೇ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ, ಇಲ್ಲಿ ಶುಭಾರಂಭಗೊಂಡ ಭಾರತ್ ಸೇವಾ ಕೇಂದ್ರವು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಜ್ ದಾರಿಮಿ, ಹೆಚ್.ಎಂ.ಎಸ್.ಗ್ರೂಪ್ಸ್ ಬೆಂಗಳೂರು ಇದರ ಆಡಳಿತನಿರ್ದೇಶಕರಾದ ಹರೀಶ್ ಎಂ.ಶೆಟ್ಟಿ, ಪಂತಡ್ಕ ಮಸೀದಿಯ ಮದರಸ ಅಧ್ಯಾಪಕರಾದ ಜಾಫರ್ ಸಾಧಿಕ್ ಅರ್ಶದಿ, ಕೋಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಉಪಾಧ್ಯಕ್ಷ ರಫೀಕ್ ಎಸ್.ಎಸ್, ನೆಟ್ಲಮುಡ್ನೂರು ಗ್ರಾ.ಪಂ ಸದಸ್ಯರು, ಪತ್ರಕರ್ತರೂ ಆದ ಲತೀಫ್ ನೇರಳಕಟ್ಟೆ, ಪ್ರಮುಖರಾದ ನಿರಂಜನ್ ರೈ, ರಿಯಾಝ್ ನೇರಳಕಟ್ಟೆ, ಇಬ್ರಾಹಿಂ ಎಸ್.ಎಂ.ಎಸ್, ಆಸೀಫ್ ಬೋಳಂತೂರು, ಶರೀಫ್ ಬಡಜ ಸೂರ್ಯ, ಮೂಸಾ ಕರೀಂ ಮಾಣಿ, ಆದಂ ಎಸ್.ಎಂ.ಎಸ್, ರಫೀಕ್ ಪಂತಡ್ಕ, ನೌಫಲ್ ಕೊಡಾಜೆ, ಸುಲೈಮಾನ್ ಮಾಣಿ, ಐಶ್ವರ್ಯ ಜ್ಯುವೆಲ್ಲರಿಯ ಮಾಲಕ ನಂದ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿದ ಸಂಸ್ಥೆಯ ಮಾಲಕ ಅಶ್ರಫ್ ತಿಂಗಳಾಡಿ ಮಾತನಾಡಿ‌, ನಮ್ಮ ಸಂಸ್ಥೆಯಲ್ಲಿ ಪಾನ್‌ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ರೇಶನ್ ಕಾರ್ಡ್, ಇಪಿಎಫ್ ಸೇವೆಗಳು, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ಜಾತಿ ಆದಾಯ ಮತ್ತು ವಾಸ್ತವ್ಯ, ಪ್ರಮಾಣ ಪತ್ರ, ಆದಾಯ ತೆರಿಗೆ ರಿಟರ್ನಿಂಗ್, ಜಿಎಸ್‌ಟಿ ರಿಜಿಸ್ಟ್ರೇಶನ್, ಪಿಂಚಣಿದಾರರ ಜೀವನ್ ಪ್ರಮಾಣ ಪತ್ರ, ಆರ್.ಟಿ.ಸಿ, ವಾಹನಗಳ ಇನ್ಸೂರೆನ್ಸ್, ವಿದ್ಯಾರ್ಥಿ ವೇತನ, ರಾಷ್ಟ್ರೀಯ ಪಿಂಚಣಿ ಯೋಜನೆ, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕ ಕಾರ್ಡ್, ವೋಟರ್ ಐಡಿ, ಇ-ಶ್ರಮ್, 9/11, ವಿವಾಹ ನೋಂದಣಿ, ವೃದ್ದಾಪ್ಯ ವೇತನ ಹಾಗು ಸಂಧ್ಯಾ ಸುರಕ್ಷಾ ಪಿಂಚಣಿ ಸೇವೆಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು. ಸಂಸ್ಥೆಯ ಸಿಬ್ಬಂದಿಗಳಾದ ರಿಯಾಜ್, ಶ್ರೇಯ, ಸಿಂಧು, ಚೇತನಾ, ಸಂಶಿನಾ ಸಹಕರಿಸಿದರು.

LEAVE A REPLY

Please enter your comment!
Please enter your name here