ಬೆಳಂದೂರು: ಮನೆಯಿಂದ ಕಳವು ಪ್ರಕರಣ- ಇಬ್ಬರನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

0

ಕಾಣಿಯೂರು: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ನಡೆಸಿದ ಆರೋಪದಲ್ಲಿ ಇಬ್ಬರು ಆರೋಪಿಗಳ ಸಹಿತ, ಕೃತ್ಯಕ್ಕೆ ಬಳಸಿದ ಕಾರು, ಕಳವಾದ ಸೊತ್ತುಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಡಬ ತಾಲೂಕಿನ ಬೆಳಂದೂರಿನ ಮೊಹಮ್ಮದ್ ನಿಜಾರ್(25) ಹಾಗೂ ಬಜ್ಪೆಯ ಅಬ್ದುಲ್ ಮುನೀರ್ (28) ಬಂಧಿತರು. ಕಡಬ ತಾಲೂಕಿನ ಬೆಳಂದೂರು ಗ್ರಾಮದ ಗುಂಡಿನಾರು ಮನೆಯೊಂದರಿಂದ ಕಳವು ನಡೆದಿತ್ತು. ಮನೆಯವರು ರಾತ್ರಿ ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದ ಫೆ.6-ಫೆ.7ರ ನಡುವಿನಲ್ಲಿ ಮನೆಯಲ್ಲಿನ ಮುಂಬಾಗಿಲು ಮುರಿಯಲು ಯತ್ನಿಸಿ, ಬಳಿಕ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಒಟ್ಟು ರೂ.1.43 ಲಕ್ಷ ಮೌಲ್ಯದ ಚಿನ್ನಭರಣ ಕಳವು ನಡೆಸಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸರ ನಿರ್ದೇಶನದಂತೆ ಪುತ್ತೂರು ಉಪವಿಭಾಗ ಡಿವೈಎಸ್‌ಪಿ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸ್ ಎಸೈ ಈರಯ್ಯ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಕಳುವಾದ ವಸ್ತುಗಳನ್ನು ಸ್ವಾಧಿನಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಅಬ್ದುಲ್ ಮುನೀರ್ ಎಂಬಾತನ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣಗಳು ಹಾಗೂ ಇನ್ನೊಬ್ಬ ಆರೋಪಿ ಮೊಹಮ್ಮದ್ ನಿಜಾರ್ ಎಂಬಾತನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here