ಪುತ್ತೂರು: 2024/25 ಸಾಲಿನ ವಿಶೇಷ ಚೇತನರ ಗ್ರಾಮ ಸಭೆಯು ಫೆ.27ರಂದು ನೆಲ್ಯಾಡಿ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಯಾಕೂಬ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಯಾಗಿ ಆಗಮಿಸಿದ ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ಬಹು ಮಟ್ಟದ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ವಿಕಲ ಚೇತನರಿಗೆ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುವ ಬಗ್ಗೆ, 2016 ವಿಕಲ ಅದಿನಿಯಮ ಕಾಯ್ದೆ ಪ್ರಕಾರ ಬ್ಯಾಟರಿ ಚಾಲಿತ ವೀಲ್ ಚೇರ್ ಬಗ್ಗೆ 4 ವಿಧದ ಆರೈಕೆದಾರರ ಪ್ರೋತ್ಸಾಹ ಧನದ ಬಗ್ಗೆ, ಹಿರಿಯ ನಾಗರಿಕರ ಕಾಯ್ದೆ, ಹಿರಿಯ ನಾಗರಿಕರ ಗುರುತು ಚೀಟಿ, ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ರೇಷ್ಮಾಶಶಿ, ತಾಲೂಕು ನೋಡೆಲ್ ಅಧಿಕಾರಿ, ಪುತ್ತೂರು ತಾಲೂಕು ಅರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪುಷ್ಪ, ನೆಲ್ಯಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್. ಜಿ ಹಾಗೂ ನೆಲ್ಯಾಡಿ ಕಾರ್ಯದರ್ಶಿ ಅಂಗು ಮುಗೇರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೆಲ್ಯಾಡಿ ಸಮುದಾಯ ಕೇಂದ್ರದ ಅರೋಗ್ಯಾಧಿಕಾರಿ ಎಂಡೋ ಪೀಡಿತರ ಆರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿಕಲಚೇತನರು /ವಿಕಲಚೇತನರ ಆರೈಕೆದಾರರು ಸೇರಿದಂತೆ ಆಶಾಕಾರ್ಯಕರ್ತರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತರು, ನೆಲ್ಯಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸಹನಾ, ನೆಲ್ಯಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂ. ಕಾರ್ಯದರ್ಶಿ ಅಂಗು ಮುಗೇರ ಕಾರ್ಯಕ್ರಮ ನಿರೂಪಿಸಿದರು.