ಪುತ್ತೂರು ಸಹಿತ ಹಲವು ಕ್ಷೇತ್ರಗಳ ಉತ್ಸವದಲ್ಲಿ ಬ್ರಹ್ಮವಾಹಕರಾಗಿ ಸೇವೆ
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತ ಹಲವು ಕ್ಷೇತ್ರಗಳಲ್ಲಿ ಉತ್ಸವ ಸಂದರ್ಭ ಬ್ರಹ್ಮವಾಹಕರಾಗಿ ಸೇವೆ ನೀಡುತ್ತಿರುವ ಅಡಿಗ ಕುಟುಂಬದ ಕೇಶವ ಅಡಿಗರು ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದಾರೆ.
ಕಣಿಪುರ ಕ್ಷೇತ್ರದ ಸನ್ನಿಧಾನದಲ್ಲಿ ಕ್ಷೇತ್ರದ ತಂತ್ರಿಯವರು ಕೇಶವ ಅಡಿಗ ಕೆ ಅವರಿಗೆ ಪ್ರಧಾನ ಅರ್ಚಕರ ಹುದ್ದೆಯನ್ನು ಹಸ್ತಾಂತರಿಸಿದರು.