ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ (ಮಾ.2) ಇಂದು ಚುನಾವಣೆ ನಡೆಯುತ್ತಿದ್ದು, ಮತದಾರರನ್ನು ಚುನಾವಣಾ ಕೇಂದ್ರಕ್ಕೆ ಕರೆ ತರುವ ಸಂಧರ್ಭದಲ್ಲಿ ಸಹಕಾರಿ ಭಾರತಿ ಮತ್ತು ರಮೇಶ ಭಟ್ ಸಹಕಾರಿ ಬಳಗದ ಮಧ್ಯೆ ಚಿಹ್ನೆಯ ಚೀಟಿ ಹಂಚುವಿಕೆಯ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದ ಘಟನೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆದಿದೆ.
ಈ ಸಂಧರ್ಭದಲ್ಲಿ ಪೋಲಿಸರು ಮದ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು.
12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 2470 ಮತಗಳಿದ್ದು ಮಧ್ಯಾಹ್ನ ವೇಳೆಗೆ ಅಂದಾಜು 50% ಮತದಾನ ನಡೆದಿದೆ.