ಪುತ್ತೂರು: ನೆಹರೂನಗರದ ಪಟ್ಲ ಪ್ಲಾನೆಟ್ನಲ್ಲಿ ಜೀವಾ ಮೆಡಿಕಲ್ಸ್ ಮಾ.2 ರಂದು ಶುಭಾರಂಭಗೊಂಡಿತು. ಕೃಷ್ಣ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು.

ಡಾ. ಅಜಿತ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಆರೋಗ್ಯವೇ ಭಾಗ್ಯ ಇಲ್ಲಿ ಔಷದ ಮಳಿಗೆ ಪ್ರಾರಂಭವಾಗಿರುವುದು ಸಂತಸದ ವಿಷಯ ಜನರಿಗೆ ಒಳ್ಳೆಯ ಆರೋಗ್ಯ ಸೇವೆ ನೀಡುತ್ತ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

ಡಾ.ಹರೀಶ್ ಮಡಿವಾಳ ಮಾತನಾಡಿ ಇಂದು ಉದ್ಘಾಟನೆಗೊಂಡಿರುವ ಸಂಸ್ಥೆಗೆ ಹೆಚ್ಚಿನ ಗ್ರಾಹಕರು ವ್ಯವಹರಿಸಿ ಸಂಸ್ಥೆಯ ಅಭಿವೃದ್ದಿಗೆ ಸಹಕರಿಸಿ ಎಂದು ಶುಭಹಾರೈಸಿದರು. ಮನೋಹರ್ ನಾಯ್ಕ್ ಕೊಳಕ್ಕಿಮರ್, ಗೋಕುಲ್ ನಾಯ್ಕ್, ಬಿಮಲ್ ನಾಯ್ಕ್, ಶ್ರೀಧರ್ ಗೌಡ, ಅಶೋಕ್ ನಾಯ್ಕ್ ಹಣಿಯೂರು, ಸುಬೋಧ್ ನಾಯ್ಕ್, ಪ್ರತಿಮಾ ಹೆಗ್ಡೆ, ಮೋಹನ್ ನಾಯ್ಕ್, ಮಂಗಳೂರು ಸೇರಿದಂತೆ ಹಲವಾರು ಗಣ್ಯರು,ಮಿತ್ರರು,ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಮಾಲಕರ ಪತ್ನಿ ಕ್ಷಮಿತಾ, ಪುತ್ರ ನಂದನ್, ಸಹೋದರಿ ಶಿಲ್ಪಾ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ರಾಧಾಕೃಷ್ಣ ನಾಯ್ಕ್ ಕೋಳಕ್ಕಿಮಾರ್ ಸ್ವಾಗತಿಸಿ ವಂದಿಸಿದರು.
ಮೆಡಿಕಲ್ಸ್ನ ಮಾಲಕ ರವಿ ಸಂಪತ್ ನಾಯ್ಕ್ ಮಾತನಾಡಿ, ಗ್ರಾಹಕರು ಆಗಮಿಸಿ ವ್ಯವಹರಿಸಿ ಸಂಸ್ಥೆ ಯಶಸ್ವಿಯಾಗಲು ಆಶೀರ್ವದಿಸಿ ಸಹಕರಿಸಿ. ನಮ್ಮಲ್ಲಿ ಎಲ್ಲಾ ತರಹದ ಔಷದಗಳು ಲಭ್ಯವಿದ್ದು ಬೆಳಿಗ್ಗೆ 7.30 ರಿಂದ ರಾತ್ರಿ 10.30ರ ತನಕ ಮೆಡಿಕಲ್ ತೆರೆದಿರುತ್ತದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.