ಪುತ್ತೂರು:ನರಿಮೊಗರು ಗ್ರಾಮದ ಮುಗೇರಡ್ಕ-ಪೊಸಮೆನ್ಪದವು ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.1ರಂದು ಕಲ್ಕುಡ ಕಲ್ಲುರ್ಟಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ನಡೆಯಿತು.
ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಗಣಹೋಮ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ನಂತರ ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ಬದ್ಕೆರೆ ಕಲ್ಪಿ ಖ್ಯಾತಿಯ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದ ‘ಮಾರ್ನೆಮಿ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ ನಡೆದ ನಂತರ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.
ಮಾಜಿ ಶಾಸಕ ಸಂಜೀವ ಮಠಂದೂರು, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯರಾದ ನವೀನ್ ರೈ ಶಿಬರ, ಹೊನ್ನಪ್ಪ ಪೂಜಾರಿ ಕೈಂದಾಡಿ, ಮಲ್ಲಿಕಾ ಲತಾ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್, ರವೀಂದ್ರ ರೈ ನೆಕ್ಕಿಲು, ಜಗನ್ಮೋಹನ್ ರೈ ಗಿಳಿಯಾಲು, ದೈವಸ್ಥಾನದ ಅಧ್ಯಕ್ಷ ಜಗದೀಶ್ ಅಮೀನ್ ನಡುಬೈಲುಗುತ್ತು, ಗೌರವಾಧ್ಯಕ್ಷ ಪರಮೇಶ್ವರ ಗೌಡ ಜಾಡೆಂಕಿ, ಉಪಾಧ್ಯಕ್ಷರಾದ ಜಯಲಕ್ಷ್ಮೀ, ರಾಜೀವ, ಖಜಾಂಚಿ ಬಿ.ಜನಾರ್ದನ ಪೂಜಾರಿ, ಕಾರ್ಯದರ್ಶಿ ಬೇಬಿ ಜಾನ್ ಕೂಡುರಸ್ತೆ, ಆಡಳಿತ ಮೊಕ್ತೇಸರರಾದ ತಾರಾನಾಥ ರೈ ಗಿಳಿಯಾಳು, ಶ್ರೀಧರ ಜೋಗಿ ಮುಗೇರಡ್ಕ, ಚೆನ್ನಪ್ಪ ಜೋಗಿ ಮುಗೇರಡ್ಕ, ಹೂವಪ್ಪ ಪೂಜಾರಿ, ಗೌರವ ಸಲಹೆಗಾರರಾದ ವಿನಯ ಸುವರ್ಣ ಕೂಡುರಸ್ತೆ, ರಮೇಶ ಜೋಗಿ ಮುಗೇರಡ್ಕ, ರಾಜೀವ ಪೂಜಾರಿ ಮುಗೇರಡ್ಕ, ವಸಂತ ಪೂಜಾರಿ ಮುಗೇರಡ್ಕ, ಶೀನಪ್ಪ ನಡುಗುಡ್ಡೆ, ಗಣೇಶ್ ಜೋಗಿ ಮುಗೇರಡ್ಕ, ಸಮಿತಿ ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ನೇಮೋತ್ಸವದಲ್ಲಿ ಭಾಗವಹಿಸಿದ್ದರು.