ಪುತ್ತೂರು: ಇಂಟರ್ ನೆಟ್ ಮತ್ತು ದೂರವಾಣಿ ಕೇಬಲ್, ಜಿತ್ ಸ್ಪೀಡ್ ನೆಟ್ ಕೇಬಲ್ ಹಾಗು ಸ್ಥಳೀಯ ಟಿವಿ ಕೇಬಲ್ ಗಳಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿದ ಘಟನೆ ಮಾ.2 ರ ಬೆಳಗ್ಗೆ ಬೆಳಕಿಗೆ ಬಂದಿದೆ.
ಪುತ್ತೂರಿನ ಸಾಲ್ಮರ ಎಪಿಎಂಸಿ ಬಳಿಯಿಂದ ಮೌಂಟನ್ ವ್ಯೂ ಶಾಲೆವರೆಗೆ ಇರುವ ಬಿ.ಎಸ್.ಎನ್.ಎಲ್ ಇದರ ಇಂಟರ್ನೆಟ್ ಮತ್ತು ದೂರವಾಣಿ ಕೇಬಲ್, ಜಿತ್ ಸ್ಪೀಡ್ ನೆಟ್ ಕೇಬಲ್ ಮತ್ತು ಸ್ಥಳೀಯ ಕೇಬಲ್ ಟಿವಿ ಕೇಬಲ್ ಸೇರಿದಂತೆ ಇರುವಂತ ಜಾಯಿಂಟ್ ಬಾಕ್ಸ್ ಗಳನ್ನು ಯಾರೋ ಕಿಡಿಗೇಡಿಗಳು ಒಡೆದು ಅದರೊಳಗಿರುವ ಜಾಯಿಂಟ್ ನ್ನು ಕಿತ್ತು ಬಿಸಾಕಿದ್ದಾರೆ. ಈ ಘಟನೆ ಮಾ.2 ರ ಬೆಳಗಿನ ಜಾವ 4 ರ ಸುಮಾರಿಗೆ ನಡೆದಿದ್ದು, ಇದರಿಂದಾಗಿ ಸುಮಾರು 150 ಇಂಟರ್ನೆಟ್ ಸೇವೆಗಳಿಗೆ ಹಾನಿಯಾಗಿರುವುದಲ್ಲದೆ ರೂ.20ಸಾವಿರ ನಷ್ಟ ವುಂಟಾಗಿದೆ ಎಂದು ಬಿ.ಎಸ್.ಎನ್.ಎಲ್ ನ ಎಫ್.ಟಿ .ಟಿ ಎಚ್ ಪ್ರ್ಯಾಂಚೈಸ್ ನ ಇ ಸುಬ್ರಹ್ಮಣ್ಯ ಭಟ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.