ಕಾಣಿಯೂರು :- ಎಳೆಯ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಅಕ್ಷರ ಕಲಿಯದೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಪ್ರಕೃತಿಯೊಂದಿಗೆ ಆಟವಾಡಬೇಕು ಎಂಬ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರ ಮಾರ್ಗದರ್ಶನದಂತೆ ಪ್ರಗತಿ ವಿದ್ಯಾ ಸಂಸ್ಥೆಯ ಎಲ್ ಕೆ ಜಿ , ಯು ಕೆ ಜಿ ಪುಟಾಣಿಗಳು ಕಾಣಿಯೂರಿನಿಂದ ನೆಟ್ಟಣದವರೆಗೆ ರೈಲು ಪ್ರಯಾಣ ಮಾಡಿ ಸಂಭ್ರಮಿಸಿದರು.

ಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಪೋಷಕ ಬಂಧು ಧನಂಜಯ ಕೇನಾಜೆ ಸಹಕರಿಸಿ ಪುಟಾಣಿಗಳೊಂದಿಗೆ ಒಂದಷ್ಟು ಸಮಯಗಳನ್ನು ಕಳೆದರು.
ಶಿಕ್ಷಕಿಯರಾದ ಸವಿತಾ ಕೆ, ಸುಚೇತ, ಶೃತಿ,ರಚನ, ರೇವತಿ, ಪ್ರತಿಭಾ ಕಾರ್ಯಕ್ರಮವನ್ನು ಸಂಘಟಿಸಿದರು. ಶಾಲಾ ಸಿಬ್ಬಂದಿಗಳಾದ ಶ್ರೀಧರ್ ಅಗಳಿ, ಶಶಿಧರ್ ಮತ್ತು ಚಂಪಾಪವತಿ ಸಹಕರಿಸಿದರು.