ಕಡಬ: ಐತ್ತೂರು ಗ್ರಾಮ ಪಂಚಾಯತ್ ವತಿಯಿಂದ ಸುಬ್ರಹ್ಮಣ್ಯ ಉಪ್ಪಿನಂಗಡಿ ರಸ್ತೆಯ ಐತ್ತೂರಿನಿಂದ ಸುಂಕದಕಟ್ಟೆಯವರೆಗೆ ರಸ್ತೆ ಬದಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗೋಣಿ ಚೀಲ ಅಳವಡಿಸಲಾಯಿತು. ಶಿವರಾತ್ರಿ ಪ್ರಯುಕ್ತ, ಸುಬ್ರಹ್ಮಣ್ಯದಿಂದ ಧರ್ಮಸ್ಥಳದವರಗೆ ಯಾತ್ರಿಗಳು ಪಾದಯತ್ರೆ ಮಾಡಿದ್ದು, ಈ ಸಂದರ್ಭದಲ್ಲಿ ಕಸ ರಸ್ತೆ ಬದಿಯಲ್ಲಿ ಎಸೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ವತ್ಸಲಾ, ಸದಸ್ಯರಾದ ಶ್ಯಾಮಲ, ಕಾವೇರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಎಂ.ಬಿ.ಕೆ. ಎಲ್.ಸಿ.ಆರ್.ಪಿ.ಪಶುಸಖಿ, ಸ್ವಚ್ಛತಾ ವಾಹಿನಿ ,ಜಯಲಕ್ಷ್ಮಿ, ಭಾನುಪ್ರಿಯಾ, ಸಹಾಯಕರಾದ ರೀತಾ ಕುಮಾರಿ ಸಂಜೀವಿನಿ ಒಕ್ಕೂಟದ ಸದಸ್ಯರು, ಮರ್ದಾಳ ಶೌರ್ಯವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಭವಾನಿಶಂಕರ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.