ಸಂಪ್ಯ: ಸ್ಟೇಷನರಿ, ಲೇಖನ ಸಾಮಾಗ್ರಿಗಳ ಮಳಿಗೆ ‘ಸ್ಟೇಷನರಿ ವೇರ್‌ಹೌಸ್’ ಶುಭಾರಂಭ

0

ಪುತ್ತೂರು: ಕಳೆದ 42 ವರ್ಷಗಳಿಂದ ದರ್ಬೆಯಲ್ಲಿ ವ್ಯವಹರಿಸುತ್ತಿರುವ ಸ್ಟೇಷನರಿ ಮತ್ತು ಲೇಖನ ಸಾಮಾಗ್ರಿಗಳ ಶುಭ ಸ್ಟೋರ‍್ಸ್‌ನ ವಿಶಾಲವಾದ ರಖಂ ಮತ್ತು ಚಿಲ್ಲರೆ ಮಾರಾಟದ ಸುಸಜ್ಜಿತ ಮಳಿಗೆ ‘ಸ್ಟೇಷನರಿ ವೇರ್‌ಹೌಸ್’ ಮಾ.3 ರಂದು ಸಂಪ್ಯ ಶ್ರೀವೆಂಕಟೇಶ್ವರ ಸಾ ಮಿಲ್‌ನ ಸಮೀಪ ಶುಭಾರಂಭಗೊಂಡಿತು.


ರಾಜೇಶ್ ಪವರ್ ಪ್ರೆಸ್‌ನ ಮ್ಹಾಲಕ ಎಂ.ಎಸ್ ರಘುನಾಥ ರಾವ್ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಉದ್ಯಮಿ ಭೀಮಯ್ಯ ಭಟ್, ಬೆದ್ರಾಳ ವೆಂಕಟೇಶ್ವರ ಸಾ ಮಿಲ್‌ನ ಮ್ಹಾಲಕ ಶ್ರೀನಿವಾಸ ಪೈ, ಆದಿತ್ಯ ಬುಕ್ ಹೌಸ್‌ನ ಪ್ರಸನ್ನ ಜಿ.ಎಸ್., ಮೋಹನ್ ಗ್ರಾಫಿಕ್ಸ್‌ನ ಮೋಹನ್, ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ ಕೆ., ಡಾ.ಶಶಿಧರ ಕಜೆ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು. ಮ್ಹಾಲಕ ಶ್ರೀ ಕೃಷ್ಣ ಭಟ್, ಕೆ.ಬಾಲಸುಬ್ರಹ್ಮಣ್ಯ ಭಟ್, ಮಂಜುಳಾವಾಣಿ, ಅರ್ಪಿತಾ, ಕೆ.ಹರಿಪ್ರಸಾದ್ ಭಟ್ ಉಪಸ್ಥಿತರಿದ್ದರು.


ಸ್ಟೇಷನರಿ ಮತ್ತು ಲೇಖನ ಸಾಮಾಗ್ರಿಗಳ ಗ್ರಾಹಕರಿಗೆ ಪೂರೈಸುವಲ್ಲಿ ಕಳೆದ 42 ವರ್ಷಗಳಿಂದ ಮನೆ ಮಾತಾಗಿರುವ ಶುಭ ಸ್ಟೋರ್ಸ್ ಇದೀಗ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿಶಾಲವಾದ ಹಾಗೂ ಸುಸಜ್ಜಿತ ಮಳಿಗೆಯನ್ನು ಪ್ರಾರಂಭಿಸಿದೆ. ಮಳಿಗೆಯಲ್ಲಿ ರಖಂ ಹಾಗೂ ಚಿಲ್ಲರೆ ದರದಲ್ಲಿ ಶಾಲೆ, ಕಾಲೇಜುಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ನೋಟ್ ಪುಸ್ತಕಗಳು, ಪಿಯುಸಿ ನಂತರ ಪಠ್ಯ ಪುಸ್ತಕಗಳು, ಕಚೇರಿ ಫೈಲ್ ಗಳು, ದಾಖಲೆ ಪುಸ್ತಕಗಳು ಸೇರಿದಂತೆ ಎಲ್ಲಾ ರೀತಿಯ ಲೇಖನ ಸಾಮಾಗ್ರಿಗಳು ಮಳಿಗೆಯಲ್ಲಿ ಲಭ್ಯವಿದೆ. ಶಾಲೆ, ಕಾಲೇಜುಗಳ ಹಾಗೂ ಕಚೇರಿಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸ್ಟೇಷನರಿ ಹಾಗೂ ಲೇಖನ ಸಾಮಾಗ್ರಿಗಳು ಲಭ್ಯವಿದ್ದು ಡೆಲಿವರಿ ಸೌಲಭ್ಯವೂ ಇದೆ. ಗ್ರಾಹಕರು ಸಹಕರಿಸಿ, ಪ್ರೋತ್ಸಾಹಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here