ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಆದಿದೈವ ಧೂಮಾವತಿ, ನೇಮೋತ್ಸವ

0

ಬಡಗನ್ನೂರು : ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಾ.3 ರಂದು ಬೆಳಗ್ಗೆ ಗಂ 6 ರಿಂದ ಶ್ರೀ ಗಣಪತಿ ಹೋಮ, ಗುರುಪೂಜೆ, ದೈವಸಾನಿಧ್ಯದಲ್ಲಿ ಶುದ್ಧಿಕಲಶ,ಧೂಮಾವತಿ ದೈವದ ಭಂಡಾರ ಇಳಿಯುವುದು. ದರ್ಶನ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ  ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ  ರವಿ ಪೂಜಾರಿ ಚಿಲಿಂಬಿ,  ಗೌರವ ಅಧ್ಯಕ್ಷರಾದ  ಪೀತಾಂಬರ  ಹೇರಾಜೆ ,ಜಯಂತ ನಡುಬೈಲು, ಮೂಕ್ತೇಸರ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ ಕೆ.ಬಿ. ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಮೋಹನ್ ದಾಸ ವಾಮಂಜೂರು, ಜತೆ ಕಾರ್ಯದರ್ಶಿ ಜಯ ವಿಕ್ರಮ್ ಶಿವಾನಂದ ಕೋಟ್ಯಾನ್ ಮಸ್ಕತ್, ಶಿವಪ್ಪ ಪೂಜಾರಿ ಮುಂಬೈ, ಸತೀಶ್ ಕುಮಾರ್ ಕೆಡೆಂಜಿ,  ಹರೀಶ್ ಕೆ ಪೂಜಾರಿ ಮಂಗಳೂರು, ಜನಾರ್ದನ ಪೂಜಾರಿ ಪದಡ್ಕ ಕೆ.ಟಿ ಪೂಜಾರಿ, ಜರಾಮಂ ಬಂಗೇರ ಹೇರಾಜೆ ರಾಜೇಂದ್ರ ಚಿಲಿಂಬಿ, ಚಂದ್ರಹಾಸ ಅಮೀನ್, ಸುಜಿತ ಬಂಗೇರ, ಶಶಿಧರ ಕಿನ್ನಿಮಜಲು, ನಾರಾಯಣ ಮಚ್ಚಿನ, ರಮಣಿ ಕೋಡಿಕಲ್ ವಿಜಯ ಕುಮಾರ್  ಸುರತ್ಕಲ್,  ಉಪಸ್ಥಿತರಿದ್ದರು.

ಸಂಜೆ ಧೂಮಾವತಿ ಬಲಿ ಉತ್ಸವ, ಮಹಾಪೂಜೆ,  ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ನಡೆಯಲಿದೆ.ರಾತ್ರಿ 8 ರಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ  ಕಲ್ಲಲ್ತಾಯ ನೇಮೋತ್ಸವ, ಕೊರತಿ ನೇಮೋತ್ಸವ ನಡೆಯಲಿದೆ.

ಮಾ.4 ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮಹ:-
ಮಾ.4 ರಂದು  ಬೆಳಗ್ಗೆ 6 ರಿಂದ  ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, 11.45 ಕ್ಕೆ  ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಗಂ 12.30 ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 3.30ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ,  5 ರಿಂದ ಧೂಮಾವತಿ ಬಲಿ ಸೇವೆ, ಸಂಜೆ 6 ರಿಂದ ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ  7 ರಿಂದ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು ರಾತ್ರಿ 8 ರಿಂದ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ನಡೆಯಲಿರುವುದು.

ರಾತ್ರಿ 9 ರಿಂದ ದೇಯಿಬೈದೆತಿ ಪ್ರಸಾದ ವಿತರಣೆ,  ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು 

LEAVE A REPLY

Please enter your comment!
Please enter your name here