- ಪುತ್ತೂರಿನ ಕಂಬಳ ನಿಂತ ನೀರಾಗದೆ ನದಿಯಾಗಿ ಹರಿಯುವಂತಾಗಲಿ-ಮಲ್ಲಿಕಾ ಪಕ್ಕಳ
- ಕಂಬಳದ ಯಶಸ್ವಿಗೆ ಮಹಾಲಿಂಗೇಶ್ವರನೇ ಕಾರಣಕರ್ತ-ಚಂದ್ರಹಾಸ ಶೆಟ್ಟಿ
- ಚಂದ್ರಹಾಸ ಶೆಟ್ಟಿಯವರೂ ಜನಪ್ರತಿನಿಧಿಯಾಗಿ ಬರಲಿ-ಅರುಣ್ ಪುತ್ತಿಲ
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮಾ.1ರಂದು ಬೆಳಿಗ್ಗೆ ಆರಂಭಗೊಂಡಿದ್ದ 32ನೇ ವರ್ಷದ ಐತಿಹಾಸಿಕ ಕೋಟಿ ಚೆನ್ನಯ ಜೋಡುಕರೆ ಕಂಬಳ ಮಾ.2ರಂದು ರಾತ್ರಿ ಸಂಪನ್ನಗೊಂಡಿದೆ. ಒಟ್ಟು ಆರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 162 ಜೊತೆ ಕೋಣಗಳು ಭಾಗವಹಿಸಿದ್ದವು. ವಿಜೇತ ಕೋಣಗಳ ಯಜಮಾನರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳರವರು ಮಾತನಾಡಿ ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕಂಬಳ ಸಣ್ಣಮಟ್ಟದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿಗಿನ ವರ್ಷಗಳಲ್ಲಿ, ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಒಂದಾದ ಕಂಬಳ ಕ್ರೀಡೆಯನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಮಟ್ಟಕ್ಕೂ ಕಂಬಳದ ಕೀರ್ತಿ ಪಸರಿಸುವಂತಾಗಿದೆ ಎಂದು ಹೇಳಿದರು. ಪುತ್ತೂರಿನಲ್ಲಿ ನಡೆಯುತ್ತಿದ್ದ ಕೋಟಿ ಚೆನ್ನಯ ಕಂಬಳವನ್ನು ಕಳೆದ 32 ವರ್ಷಗಳಿಂದ ಗ್ಯಾಲರಿಯಲ್ಲಿ ಕುಳಿತುಕೊಂಡು ವೀಕ್ಷಿಸುತ್ತಿದ್ದ ನನಗೆ ಇಂದು ಸಮಾರೋಪ ಸಮಾರಂಭದ ಅಧ್ಯಕ್ಷಳಾಗಿ ಮಾತನಾಡುವ ಅವಕಾಶವನ್ನು ಆ ದೇವರು ನನಗೆ ಕರುಣಿಸಿದ್ದಾರೆ. ಇದು ನನ್ನ ಭಾಗ್ಯವಾಗಿದೆ ಎಂದು ಹೇಳಿದ ಅವರು, ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಕಂಬಳ ಕ್ರೀಡೆಯು ನಿಂತ ನೀರಾಗದೆ ಹರಿಯುವ ನದಿಯಾಗಿ ಮುಂದೆ ಸಾಗಲಿ ಎಂದರಲ್ಲದೆ, ಈ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಿದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮುಂದೆ ಎಂಎಲ್‌ಎ ಅಥವಾ ಮಂತ್ರಿಯಾಗಿ ಬರಲಿ ಎಂದು ಆಶಿಸಿದರು.
ಕಂಬಳ ಯಶಸ್ವಿಯಾಗಲು ಮಹಾಲಿಂಗೇಶ್ವರನೇ ಕಾರಣಕರ್ತ:
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಅವರು ಮಾತನಾಡಿ, ವರ್ಷಂಪ್ರತಿಯಂತೆ ಈ ಬಾರಿ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದು ಹೊಸ ಇತಿಹಾಸ ನಿರ್ಮಿಸಿದೆ.ಕಂಬಳದ ಯಶಸ್ಸಿಗಾಗಿ ಕಳೆದ ಹಲವಾರು ದಿನಗಳಿಂದ ಹಗಲು ರಾತ್ರಿ ದುಡಿದ ಕಂಬಳ ಸಮಿತಿಯ ಪದಾಽಕಾರಿಗಳಿಗೆ,ಸದಸ್ಯರಿಗೆ, ಎಲ್ಲಾ ಸ್ವಯಂಸೇವಕರಿಗೆ, ಕಂಬಳ ಅಭಿಮಾನಿಗಳಿಗೆ ಹಾಗೂ ತನು-ಮನ-ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಮುಂದೆಯೂ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.ಈ ಕಂಬಳ ಯಶಸ್ವಿಯಾಗಿ ನಡೆಯಲು ಮಹಾಲಿಂಗೇಶ್ವರನೇ ಕಾರಣಕರ್ತ ಯಾವುದೇ ಅಹಿತಕರ ಘಟನೆ ನಡೆಯದೆ ಕಂಬಳ ಸುಲಲಿತವಾಗಿ ನಡೆಯಲು ಮಹಾಲಿಂಗೇಶ್ವರನ ಆಶೀರ್ವಾದವೇ ಕಾರಣವಾಗಿದೆ ಎಂದು ಅವರು ಹೇಳಿದರು.
ಕಿರಿಕಿರಿ ಮಾಡಿದವರಿಗೆ ಕಂಬಳ ಕೂಟ ಸಿಗಲಿಲ್ಲ:
ಇಲ್ಲಿ ಕಿರಿಕಿರಿ ಮಾಡಿಕೊಂಡು ಹೋದ ಎಷ್ಟೋ ಜನರಿಗೆ ಕಂಬಳ ಕೂಟ ಸಿಗಲಿಲ್ಲ.ಬಳಿಕ ಅವರು ಬಂದು ನಮ್ಮನ್ನು ಕರೆದು, ನಮ್ಮಿಂದ ತಪ್ಪಾಗಿದೆ ಎಂದು ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿಸಿಕೊಂಡು ಹೋದ ಎಷ್ಟೋ ನಿದರ್ಶನಗಳಿವೆ.ಇಲ್ಲಿ ಏನಾದರೂ ತೊಂದರೆಯಾಗಿದ್ದರೆ, ತಪ್ಪಾದರೆ ನೀವು ಅದನ್ನು ವಿರೋಧ ಮಾಡಲು ಹೋಗಬೇಡಿ ದೇವರಲ್ಲಿ ಹೇಳಿರಿ ಇಲ್ಲದಿದ್ದರೆ ನಮ್ಮಲ್ಲಿ ಹೇಳಿರಿ, ನಮ್ಮಿಂದ ತಪ್ಪಾಗಿದ್ದರೆ ನಾವು ಒಪ್ಪಿಕೊಳ್ಳುತ್ತೇವೆ. ಅಹಂಕಾರ ಮೆರೆಯಲು ಇದು ದೇವಸ್ಥಾನದ ಗದ್ದೆ ಆದ ಕಾರಣ ನಾವು ಮಾತನಾಡುವುದಿಲ್ಲ,ಹೊರಗೆ ನಾವು ಉತ್ತರ ಕೊಡುತ್ತೇವೆ.ಇದಕ್ಕೆ ಅವಕಾಶ ಕೊಡಬೇಡಿ ಎಂದು ಕೋಣಗಳ ಮಾಲಕರಲ್ಲಿ ಚಂದ್ರಹಾಸ ಶೆಟ್ಟಿ ಅವರು ವಿನಂತಿಸಿಕೊಂಡರು.
ಚಂದ್ರಹಾಸ ಶೆಟ್ಟಿಯವರು ಜನಪ್ರತಿನಿಧಿಯಾಗಲಿ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ, ಜಯಂತ ರೈ ವೇದಿಕೆಯಲ್ಲಿ ವಿನಯ್ ಕುಮಾರ್ ಸೊರಕೆ, ಅಶೋಕ್ ಕುಮಾರ್ ರೈಯವರ ಸಂಚಾಲಕತ್ವದಲ್ಲಿ ನಡೆಯುತ್ತಾ ಬಂದಿರುವ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಯಶಸ್ವಿ ಅಧ್ಯಕ್ಷರಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅತ್ಯಂತ ಸಂಭ್ರಮ ಸಡಗರದಿಂದ ಕಂಬಳವನ್ನು ನಡೆಸಿಕೊಂಡು ಪುತ್ತೂರಿನ ಹೆಸರನ್ನು ಹತ್ತೂರಿಗೆ ಪಸರಿಸುತ್ತಿರುವ ಚಂದ್ರಹಾಸ ಶೆಟ್ಟಿಯವರ ಸೇವೆ ಶ್ಲಾಘನೀಯವಾಗಿದೆ.ಅತ್ಯಂತ ಯಶಸ್ವಿಯಾಗಿ ಕಂಬಳವನ್ನು ನಡೆಸುವ ಮೂಲಕ ತಾನೊಬ್ಬ ಸಮರ್ಥ ನಾಯಕನಾಗಿ ಜನಮಾನಸದಲ್ಲಿ ಪ್ರೀತಿ ವಿಶ್ವಾಸವನ್ನು ಗಳಿಸಿರುವ ಯಶಸ್ವಿ ನಾಯಕರಾಗಿದ್ದಾರೆ ಎಂದು ಹೇಳಿದರು.ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ಆ ಮಹಾಲಿಂಗೇಶ್ವರನ ಪೂರ್ಣಾನುಗ್ರಹದ ಜೊತೆಗೆ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದ ಅವರು, ಪುತ್ತೂರಿನ ಕಂಬಳ ಆಯೋಜನೆ ಮಾಡಿದಂತಹ ವ್ಯಕ್ತಿ ಮುಂದಿನ ದಿನಗಳಲ್ಲಿ ಜನಪ್ರತಿನಿಽ ಆಗುತ್ತಾರೆ, ಮಂತ್ರಿ ಆಗುತ್ತಾರೆ ಎಂದು ಕೇಳಿದ್ದೇನೆ. ಭಗವಂತನ ಅನುಗ್ರಹದೊಂದಿಗೆ ಚಂದ್ರಹಾಸ ಶೆಟ್ಟಿ ಅವರು ಕೂಡ ಮುಂದೆ ಜನಪ್ರತಿನಿಧಿಯಾಗಿ ಮಂತ್ರಿಯಾಗಿ ಬರುವ ಭಾಗ್ಯವನ್ನು ಆ ಭಗವಂತನು ಕರುಣಿಸಲಿ ಎಂದು ಹೇಳಿದರು.
ಪುತ್ತೂರು ಕಂಬಳ ಪವರ್ ಫುಲ್ ಕಂಬಳ:
ಮುಖ್ಯ ಅತಿಥಿಯಾಗಿದ್ದ ಎಸ್‌ಎಲ್‌ವಿ ಬುಕ್‌ನ ಮಾಲಕ ದಿವಾಕರ್ ದಾಸ್‌ರವರು ಮಾತನಾಡಿ ಮಹಾಲಿಂಗೇಶ್ವರನ ಈ ಸ್ಥಳದಲ್ಲಿ ಪವರ್ ಫುಲ್ ಕಂಬಳ ನಡೆದಿದೆ. ೩೨ನೇ ವರ್ಷದ ಕಂಬಳ ಯಶಸ್ವಿಯಾಗಿ ನಡೆಯಲು ಮಹಾಲಿಂಗೇಶ್ವರನೇ ಕಾರಣನಾಗಿದ್ದಾನೆ. ಮುಂದೆಯೂ ಕೋಟಿ ಚೆನ್ನಯ ಕಂಬಳವು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ.ಶೆಟ್ಟಿ, ಕೃಷ್ಣವೇಣಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯೂರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಅಳ್ವ, ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಆರಿಯಡ್ಕ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ಮಾನಕ ಜ್ಯುವೆಲ್ಸ್ ಮಾಲಕ ಸಿದ್ದನಾಥ ಎಸ್.ಕೆ., ಪುತ್ತೂರು ಮೂಕಾಂಬಿಕಾ ಗ್ಯಾಸ್ ಮಾಲಕ ಸಂಜೀವ ಆಳ್ವ, ಪುತ್ತೂರು ಅಭಿಮಾನ್ ಬಾರ್ ಆಂಡ್ ರೆಸ್ಟೋರೆಂಟ್ ಮಾಲಕ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಉದ್ಯಮಿ ಪ್ರಶಾಂತ್ ಶೆಣೈ, ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ., ಸದಸ್ಯರುಗಳಾದ ಜೀವಂಧರ್ ಜೈನ್, ರಮೇಶ್ ರೈ ನೆಲ್ಲಿಕಟ್ಟೆ,ದಿನೇಶ್ ಶೇವಿರೆ, ರಿಯಾಜ್ ಪರ್ಲಡ್ಕ, ರಾಬಿನ್ ತಾವ್ರೋ, ಶೈಲಾ ಪೈ, ಪಿ.ಜಿ.ಜಗನ್ನಿವಾಸ ರಾವ್, ಹನುಮಾನ್ ಏಜೆನ್ಸಿ ನೆಲ್ಲಿಕಟ್ಟೆ ದಿನೇಶ್ ರೈ ಮೂಲೆ,ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಎ ಪೂಜಾರಿ,ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ರೋಟರಿ ಕ್ಲಬ್ ಸಹಾಯಕ ಸೂರ್ಯನಾಥ್ ಆಳ್ವ, ಪುತ್ತೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಉದ್ಯಮಿಗಳಾದ ಸಂತೋಷ್ ಕುಮಾರ್ ರೈ ಕೈಕಾರ,ಮುಳಿಯ ಕೇಶವಪ್ರಸಾದ್,ಅರಿಯಡ್ಕ ಚಿಕ್ಕಪ್ಪ ನಾೖಕ್,ಪುತ್ತೂರು ತಾಲೂಕು ಆರೋಗ್ಯ ಅಽಕಾರಿ ಡಾ.ದೀಪಕ್ ರೈ, ದರ್ಬೆ ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ಎಂ, ಪುತ್ತೂರು ಪೊಪ್ಯುಲರ್ ಫುಡ್ ಪ್ರೊಡಕ್ಟ್‌ನ ನರಸಿಂಹ ಕಾಮತ್, ಪುತ್ತೂರು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ,ಹೋಟೆಲ್ ಸುಜಾತ ಮಾಲಕ ಸುಶಾಮ್ ಶೆಟ್ಟಿ, ಕೋಡಿಂಬಾಡಿ ಕೃಷ್ಣಕೃಪಾ ಇಂಡಸ್ಟ್ರೀಸ್‌ನ ಭವಿನ್ ಸವಜಾನಿ, ಪುತ್ತೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ರೈ, ನ್ಯಾಯವಾದಿಗಳಾದ ಬೆಟ್ಟ ಈಶ್ವರ ಭಟ್, ಭಾಸ್ಕರ ಗೌಡ ಕೋಡಿಂಬಾಳ, ಅರಿಯಡ್ಕ ಉದಯಶಂಕರ್ ಶೆಟ್ಟಿ, ಎ.ದಿನಕರ ರೈ, ರಾಕೇಶ್ ಮಸ್ಕರೇನ್ಹಸ್, ಪುತ್ತೂರು ಅಶ್ಮಿ ಟವರ್‌ನ ಸಂತೋಷ್ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ಸಂಚಾಲಕ ದಯಾನಂದ ರೈ ಮನವಳಿಕೆ, ಉದ್ಯಮಿ ಶಮ್ಮೂನ್ ಹಾಜಿ ಪರ್ಲಡ್ಕ,ತಾಲೂಕು ಪಂಚಾಯತಿ ಮಾಜಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ, ಪುತ್ತೂರು ಬ್ಲಾಕ್ ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ,ಕೆದಂಬಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತೂರು ಅಕ್ರಮ ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ಮಾಣಿ ಪೆರಾಜೆ ಗ್ರಾ.ಪಂ.ಅಧ್ಯಕ್ಷ ಕುಶಲ ಪೆರಾಜೆ, ಬೆಂಗಳೂರು ಕ್ಷೇತ್ರ ಶಿಕ್ಷಣ ಸಂಯೋಜಕ ಪ್ರವೀಣ್ ಕುಮಾರ್ ಆರ್.,ಬೆಂಗಳೂರು ಸೋನಾ ಕ್ಯಾಟರರ್ಸ್‌ನ ಸೋನಾ ಗಣೇಶ್ ನಾಯಕ್, ಬೆಂಗಳೂರು ಹೋಟೆಲ್ ಉದ್ಯಮಿ ಡಿ.ಬಿ.ಪ್ರಸಾದ್ ಶೆಟ್ಟಿ,ಬೆಂಗಳೂರು ಉದ್ಯಮಿ ಈಶೇಂದ್ರ ಶೆಟ್ಟಿ,ಬೆಂಗಳೂರು ಹೋಟೆಲ್ ಕೃಷ್ಣ ಕುಟೀರದ ರಾಘವೇಂದ್ರ, ಪುತ್ತೂರು ಕಲ್ಲಾರೆ ಡ್ಯಾಶ್ ಮಾರ್ಕೆಟಿಂಗ್ ನಿಹಾಲ್ ಪಿ.ಶೆಟ್ಟಿ, ಪುತ್ತೂರು ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಪುತ್ತೂರು ಉದ್ಯಮಿ ರಿತೇಶ್ ಶೆಟ್ಟಿ,ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ,ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಉಮೇಶ್ ಕವಾಡಿ, ಬೆಂಗಳೂರು ಉದ್ಯಮಿ ಮಾರ್ನಡ್ಕ ಬನ್ನೂರು ಮನೋಹರ ಶೆಟ್ಟಿ, ಬಾಳಾಯ ಲೋಹಿತ್ ಬಂಗೇರ, ಬೊಳುವಾರು ಪ್ರಣಾಮ್ ಎಂಟರ್‌ಪ್ರೈಸಸ್‌ನ ದಯಾನಂದ ರೈ, ವಿಟ್ಲ ಪಂಚಾಯತಿ ಮಾಜಿ ಅಧ್ಯಕ್ಷ ರಮಾನಾಥ್ ವಿಟ್ಲ, ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ, ಪಡೀಲ್ ವಿಘ್ನೇಶ್ವರ ಇಂಡಸ್ಟ್ರೀಸ್‌ನ ಮಾಲಕ ಸುಧೀರ್ ಶೆಟ್ಟಿ, ಉದ್ಯಮಿಗಳಾದ ಹರಿಪ್ರಸಾದ್ ರೈ ತಿಂಗಳಾಡಿ, ಗಂಗಾಧರ ಶೆಟ್ಟಿ ಕೈಕಾರ,ಶಿವರಾಮ ಭಟ್ ಬಿಕರ್ನಕಟ್ಟೆ, ಕಬಕ ಗೀತಾ ಬಾರ್ ರೆಸ್ಟೋರೆಂಟ್ ಮಾಲಕ ರಾಮಣ್ಣ ಪೂಜಾರಿ, ಪುತ್ತೂರು ಸ್ಪೋರ್ಟ್ಸ್ ವರ್ಲ್ಡ್ ಮಾಲಕ ಅಬ್ದುಲ್ ರಝಾಕ್,ಮಾಣಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಪುತ್ತೂರು ಕಟ್ಟಾವು ಇನ್ಸೂರೆನ್ಸ್‌ನ ಮಾಲಕ ಸತೀಶ್ ರೈ ಕಟ್ಟಾವು,ಬೋಳುವಾರು ಏಸ್ ಮೋಟರ್ಸ್‌ನ ಆಕಾಶ್ ಐತಾಳ್, ಕೃಷಿ ಇಲಾಖೆಯ ಅಽಕ್ಷಕ ಕೃಷ್ಣಪ್ರಸಾದ್ ಭಂಡಾರಿ, ರವಿ ಪ್ರೊವಿಜನ್ ಸ್ಟೋರ್‌ನ ಮಾಲಕ ರವಿ, ಬೊಳುವಾರು ವಿನಾಯಕ ಫ್ಯಾಬ್ರಿಕೇಶನ್ನ ನವೀನ್ ಶೆಟ್ಟಿ, ಪುತ್ತೂರು ಫಾಸ್ಟ್ ಟ್ರ್ಯಾಕ್ಸ್‌ನ ಶಫಿ ಸುಳ್ಯ,ತೆಂಕಿಲ ಮೋಹನ್ ನ್ಯಾಕ್,ಬೆದ್ರಾಳ ಪದ್ಮನಾಭ ಪೂಜಾರಿ, ಬನ್ನೂರು ಆನೆಮಜಲು ಚಂದ್ರಹಾಸ ಶೆಟ್ಟಿ, ಶೇಖರ ಗೌಡ ಬನ್ನೂರು,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಉದ್ಯಮಿ ಕೊಂಬೆಟ್ಟು ಗಿರಿಧರ ಹೆಗ್ಡೆ, ಪುತ್ತೂರು ಜನ್ಮ ಫೌಂಡೇಶನ್ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ನಿವೃತ್ತ ಉಪವಲಯ ಅರಣ್ಯಾಧಿಕಾರಿ ಕೃಷ್ಣಪ್ಪ, ಬನ್ನೂರು ಕ್ರಿಸ್ಟಲ್ ಸ್ಟೀಲ್ ಇಂಡಸ್ಟ್ರೀಸ್ ಮಾಲಕ ಕಿರಣ್ ಡಿಸೋಜ,ಪುತ್ತೂರು ನಿರಾಲ ಬಾರ್ ಆಂಡ್ ರೆಸ್ಟೋರೆಂಟ್‌ನ ಮಾಲಕ ನಿರೀಕ್ಷಿತ್ ರೈ,ಮಂಜುನಾಥ ಗೌಡ ಬನ್ನೂರು,ಯೂಸುಫ್ ಹಾಜಿ ಕೈಕಾರ,ಪಡೀಲ್ ಕ್ರಿಸ್ಟಲ್ ಇಂಡಸ್ಟ್ರೀಸ್ ಮಾಲಕ ವಾಲ್ಡರ್ ಡಿಸೋಜ, ಮಲ್ನಾಡ್ ಎಂಟರ್‌ಪ್ರೈಸಸ್‌ನ ಎಂ.ಪಿ.ಉಮ್ಮರ್,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್,ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೇರ, ಲೋಕೇಶ್ ಪಡ್ಡಾಯೂರು, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ವಾಲ್ತಾಜೆ, ಆಯ್ಕೆ ಗ್ಲಾಸ್ ಆಂಡ್ ಪ್ಲೈವುಡ್ಸ್‌ನ ಇಮ್ರಾನ್ ಖಾನ್, ಪಡ್ನೂರು ಧೂಮಾವತಿ ಯುವಕ ಮಂಡಲದ ಅಧ್ಯಕ್ಷ ಶೀನಪ್ಪ ಪೂಜಾರಿ, ಉಪ್ಪಿನಂಗಡಿ ಎಂ.ಜಿ. ಅಬೂಬಕ್ಕರ್ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸಂಚಾಲಕ ವಸಂತ ಕುಮಾರ್ ರೈ ದುಗ್ಗಳ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿವಿ,ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ಸುದರ್ಶನ್ ನ್ಯಾಕ್ ಕಂಪ, ಚಿನ್ನಪ್ಪ ಪೂಜಾರಿ ಮುರ, ಶಶಿಕಿರಣ್ ರೈ ನೂಜಿಬೈಲು, ರೋಷನ್ ರೈ ಬನ್ನೂರು,ರಂಜಿತ್ ಬಂಗೇರ, ಪನಡ್ಕ ಗಂಗಾಧರ ಶೆಟ್ಟಿ ಕೈಕಾರ, ಪ್ರವೀಣ್ ಶೆಟ್ಟಿ ಅಳಕೆಮಜಲು, ಶರತ್ ಕೇಪುಳು,ಪ್ರತೀಕ್ ಚಿಕ್ಕ ಪುತ್ತೂರು ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ವಸಂತ ಕುಮಾರ್ ರೈ ದುಗ್ಗಲ ವಂದಿಸಿದರು.
ಅತೀ ಹೆಚ್ಚು ಜನ ಸೇರುವ ಕಂಬಳ
ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಿಗೆ ನಾನು ಹೋಗುತ್ತೇನೆ.ಆದರೆ ಬಹುಮಾನ ವಿತರಣೆ ಸಂದರ್ಭ ಇಷ್ಟೊಂದು ಜನರು ಎಲ್ಲಿಯೂ ಸೇರುವುದಿಲ್ಲ. ಅತೀ ಹೆಚ್ಚು ಜನ ಸೇರುವ ಕೂಟ ಇದ್ದರೆ ಅದು ಪುತ್ತೂರಿನ ಕಂಬಳಕೂಟ. ಕರೆಯಲ್ಲಿ ಇವತ್ತು ನನಗೊಂದು ಬೇಸರ ಅಗಿತ್ತು. ಚಂದ್ರಹಾಸ ಶೆಟ್ಟಿಯವರು ಹೇಳಿದ ಹಾಗೆ ಅದನ್ನು ಮಹಾಲಿಂಗೇಶ್ವರ ದೇವರ ಮಡಿಲಿಗೆ ಹಾಕುತ್ತೇನೆ. ಯಾರು ಅನ್ಯಾಯ ಮಾಡುತ್ತಾರೋ ಅವರಿಗೆ ಒಳ್ಳೆಯ ಬುದ್ದಿ ಕೊಡುವಂತೆ ಪ್ರಾರ್ಥನೆ ಮಾಡುತ್ತೇನೆ. ಯಾರೋ ಒಬ್ಬರು ಮಾತನಾಡಿದ್ದಾರೆ. ಅವರ ಹೆಸರು ಉಲ್ಲೇಖ ಮಾಡುವುದಿಲ್ಲ. ಸೋಷಿಯಲ್ ಮೀಡಿಯಾ ಭಾರೀ ಜೋರಿನಲ್ಲಿದೆ. ಹಾಗಾಗಿ ಉಲ್ಲೇಖ ಮಾಡುವುದಿಲ್ಲ ಎಂದು ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿಯವರು, ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸುವ ಸಂದರ್ಭ ಹೇಳಿದರು. ಇವತ್ತು ಅತಿ ವೇಗದ ಕಂಬಳದ ಓಟಗಾರ ರಕ್ಷಿತ್ ಶೆಟ್ಟಿ ಅವರು ದಾಖಲೆ ಮಾಡಿದ್ದಾರೆ. ಅವರಿಗೆ ಅಭಿರಾಮ್ ಫ್ರೆಂಡ್ಸ್ ವಿಶೇಷವಾದ ಬಹುಮಾನವಾಗಿ ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ ಎಂದು ಅವರು ಹೇಳಿದರು.
ಧಾರ್ಮಿಕ ಸೇವೆಯಲ್ಲಿ ಹೊಸ ಇತಿಹಾಸ
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು, ಅತ್ಯಂತ ಎಳೆಯಪ್ರಾಯದಲ್ಲಿ ಅಧಿಕಾರ ಸಿಕ್ಕಿದರೆ ಯಾವ ರೀತಿಯಲ್ಲಿ ಆಡಳಿತ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಧಾರ್ಮಿಕ ವ್ಯವಸ್ಥೆಯಲ್ಲಿ ಇವರ ಸೇವೆಯಿಂದ ಹೊಸ ಇತಿಹಾಸ ನಿರ್ಮಾಣ ಆಗಿದೆ-
ಅರುಣ್ ಕುಮಾರ್ ಪುತ್ತಿಲ
ಕಂಬಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕೆಸರುಗದ್ದೆ ಓಟ
ಕಂಬಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಂಬಳದ ಕರೆಯಲ್ಲೇ ಕೆಸರು ಗದ್ದೆ ಓಟವು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ನಡೆದಿದೆ.ಒಂದಷ್ಟು ಭವಿಷ್ಯದ ಕಂಬಳದ ಓಟಗಾರರನ್ನು ರೂಪಿಸುವ ಸಲುವಾಗಿ ಕೆಸರುಗದ್ದೆ ಓಟವನ್ನು ಏರ್ಪಡಿಸಲಾಗಿತ್ತು.
ಹಲವು ವಿಶೇಷೆಗಳು:
ಕೆಂಪು ಮುಂಡಾಸಿನ ಕಾರ್ಯಕರ್ತರಿಗೆ ಮುಂಡಾಸಿನ ಜೊತೆಗೆ ಈ ಬಾರಿ ಆಕರ್ಷಕ ಡಿಜಿಟಲ್ ಬ್ಯಾಡ್ಜ್ ಅನ್ನು ನೀಡಲಾಗಿತ್ತು. ಫಲಿತಾಂಶಕ್ಕಾಗಿ ಲೇಸರ್ ಫಿನಿಶಿಂಗ್ ವ್ಯವಸ್ಥೆ, ಕೋಣಗಳ ಸ್ನಾನಕ್ಕೆ ಶುದ್ದ ನೀರಿನ ತೊಟ್ಟಿ ವ್ಯವಸ್ಥೆ, ಕಂಬಳ ವೀಕ್ಷಣೆಗೆ ಕರೆಯ ಎರಡು ಕಡೆಗಳಲ್ಲಿ ಪೆಂಡಾಲ್ ಮತ್ತು ಗ್ಯಾಲರಿ ಸೌಲಭ್ಯ. ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯ, ಪ್ರತಿ ವಿಭಾಗದ ಕೋಣಗಳು ಕರೆಗೆ ಇಳಿಯುವ ಸಂದರ್ಭ ಬ್ಯಾಂಡ್, ಕಹಳೆಯ ಮಂಗಲ ವಾದ್ಯ ಮೊಳಗಿಸಲಾಗುತ್ತಿತ್ತು. ರಾತ್ರಿ ಸಭಾ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ನಟಿಯರ ಮೆರುಗು, ಕಂಬಳದ ಓಟದ ಕುರಿತು ಆಕರ್ಷಕ ವಿಶ್ಲೇಷಣೆ ವಿಶೇಷತೆಯಾಗಿತ್ತು.
ಸೌಲಭ್ಯ:
ಕೋಣಗಳ ವಿಶ್ರಾಂತಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ, ಕೋಣಗಳ ಓಟಗಾರರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಆರೋಗ್ಯಕ್ಕೆ ತಾಲೂಕು ಆಸ್ಪತ್ರೆಯಿಂದ ಅರೋಗ್ಯ ಸೇವೆ, ಪಶು ವೈದ್ಯಕೀಯ ಸೇವೆ, ಅಗ್ನಿ ಅವಘಡವಾಗದಂತೆ ಬೆಂಕಿ ಶಮನದ ವ್ಯವಸ್ಥೆ, ಅಗ್ನಿಶಾಮಕ ದಳದ ವಾಹನ, ಅಂಗಡಿ ಸ್ಟಾಲ್‌ಗಳಿಗೆ ಪ್ರತ್ಯೇಕ ಸ್ಥಳಾವಕಾಶ, ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ, ಕಂಬಳದ ಕರೆಗಳಿಗೆ ನೀರು ಕಡಿಮೆ ಆಗದಂತೆ ನೀರಿನ ಸೌಲಭ್ಯ ಮಾಡಲಾಗಿತ್ತು.
ತೀರ್ಪುಗಾರರ ಶ್ರಮ:
ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ತೀರ್ಪುಗಾರರು ಬಹಳ ಶ್ರಮ ಪಟ್ಟಿದ್ದಾರೆ. ಪ್ರಧಾನ ತೀರ್ಪುಗಾರರಾಗಿ ಕೆ.ಗೊಣಪಾಲ ಕಡಂಬ ಮೂಡಬಿದ್ರೆ, ಎಂ.ರಾಜೀವ್ ಶೆಟ್ಟಿ ಎಡ್ತೂರು,ತೀರ್ಪುಗಾರರ ಸಂಚಾಲಕರಾಗಿ ಎಚ್.ವಿಜಯಕುಮಾರ್ ಕಂಗಿನಮನೆ, ತೀರ್ಪುಗಾರರಾಗಿ ಎಂ. ಸುಧಾಕರ ಶೆಟ್ಟಿ ಮುಗೆರೋಡಿ, ನಿರಂಜನ ರೈ ಮಠಂತಬೆಟ್ಟು, ರವೀಂದ್ರ ಕುಮಾರ್ ಕುಕ್ಕುಂದೂರು, ಸತೀಶ್ ಕುಮಾರ್ ಹೊಸ್ಮಾರು, ಕೋಣಗಳನ್ನು ಬಿಡಿಸುವವರು ಅಪ್ಪು ಯಾನೆ ವಲೇರಿಯನ್ ದೇಸಾ ಅಲ್ಲಿಪಾದೆ, ಸುಧೀರ್ ಕುಮಾರ್ ಆರಿಗ ಬಂಗಾಡಿ, ಅಜಿತ್ ಕುಮಾರ್ ಜೈನ್ ಈದು ,ಜನಾರ್ದನ ನಾಯ್ಕ ಕರ್ಪೆ, ವಿಶ್ವನಾಥ ಪ್ರಭು ಶಿರ್ವ,ಕೋಣಗಳನ್ನು ಬಿಡಿಸುವಲ್ಲಿ ಪ್ರಕಟಣೆಗಾರರಾಗಿ ಶೀನ ಶೆಟ್ಟಿ ವೀರಕಂಬ, ಉಮೇಶ್ ಕರ್ಕೇರ ಪುತ್ತೂರು, ಮಹಾವೀರ್ ಜೈನ್ ಕಜೆ ವೇಣೂರು, ಪ್ರಕಾಶ್ ಕಜೆಕಾರು, ಸುಽರ್ ಶಿರ್ಲಾಲು, ಪದ್ಮನಾಭ ರೈ ಕಂಪದಬೈಲು, ಅಶ್ವತ್ಥ್ ಕೆಲ್ಲಪುತ್ತಿಗೆ, ಬರವಣಿಗೆ ಮತ್ತು ದಾಖಲೆ ನಿರ್ವಹಣೆ ಸಂಕಪ್ಪ ಶೆಟ್ಟಿ ನಗ್ರಿ, ದಿನೇಶ ಕಕ್ಕೆಪದವು, ಶ್ರೀಧರ ಆಚಾರ್ಯ ಸಾಣೂರು, ಗಂತ್‌ನಲ್ಲಿ ಸುದರ್ಶನ್ ನಾಕ್ ಕಂಪ, ಸಚಿನ್ ಸರೋಳಿ, ಪ್ರೇಮಾನಂದ ನಾಕ್, ನವೀನ್‌ಚಂದ್ರ ನಾಕ್ ಬೆದ್ರಾಳ, ದಿನೇಶ್ ಶೆಟ್ಟಿ ಬರಮೇಲು, ಯತೀಶ್ ಶೆಟ್ಟಿ ಬರಮೇಲು, ಸೂರಜ್ ಗೌಡ ಕೊಡಿಪಾಡಿ, ಬೇಬಿ ಜಾನ್ ಪುರುಷರಕಟ್ಟೆ, ರಾಜೀವ್ ನಾಯ್ಕ ನೆಲ್ಲಿಕಟ್ಟೆ, ಜತಿನ್ ನಾಯ್ಕ್, ಕಂಪ, ಕಿಶನ್ ನ್ಯಾಕ್ ಸರೋಳಿ, ವಿಭಾಗ ಪರಿಶೀಲನೆಗಾರರಾಗಿ ಸದಾಶಿವ ಸಾಮಾನಿ ಸಂಪಿಗೆದಡಿ, ಪದ್ಮನಾಭ ಪಕ್ಕಳ ಕುಂಡಾಪು, ಗೋಪಾಲ ಶೆಟ್ಟಿ, ಮಂಜೊಟ್ಟಿ ನಿರ್ವಹಣೆಯಲ್ಲಿ ಗಣೇಶ್‌ರಾಜ್ ಬಿಳಿಯೂರು, ವಿಕ್ರಂ ಶೆಟ್ಟಿ ಅಂತರ, ಶಿವಪ್ರಸಾದ್ ರೈ ಮಠಂತಬೆಟ್ಟು, ಪ್ರವೀಣ್ ಶೆಟ್ಟಿ ಅಳಕೆಮಜಲು, ಚಂದ್ರಹಾಸ ಶೆಟ್ಟಿ ಬನ್ನೂರು, ಸುಶಾಂತ್ ಶೆಟ್ಟಿ ಅಳಕೆಮಜಲ್, ಸುಮಿತ್ ಶೆಟ್ಟಿ ಆಳಕೆಮಜಲ್, ದಾಮೋದರ ಶೆಟ್ಟಿ ಮಠಂತಬೆಟ್ಟು, ನೀರಾವರಿ ನಿರ್ವಹಣೆಯಲ್ಲಿ ಸುದೇಶ್ ನ್ಯಾಕ್ ಚಿಕ್ಕಪುತ್ತೂರು, ಶಶಿಕುಮಾರ್ ನೆಲ್ಲಿಕಟ್ಟೆ, ಜನಾರ್ದನ ಬಂಗೇರ, ಸುಂದರ ಪರ್ಲಡ್ಕ ಸಹಕರಿಸಿದರು.