ಪುತ್ತೂರು: ಪ್ರತಿಷ್ಠಿತ ಹರ್ಷ ಮಳಿಗೆಯಲ್ಲಿ ನಡೆಯುವ ಅತಿದೊಡ್ಡ ಶಾಪಿಂಗ್ ಹಬ್ಬ ‘ಹರ್ಷೋತ್ಸವ’ ಮಾ.೩ರಂದು ಆರಂಭಗೊಂಡಿದೆ.
ಪುತ್ತೂರು ಸಿಟಿ ಹಾಸ್ಪಿಟಲ್‌ನ ಡಾ.ಗೋಪಿನಾಥ ಪೈ ಅವರು ಹರ್ಷೋತ್ಸವ ಉದ್ಘಾಟಿಸಿ ಶುಭಹಾರೈಸಿದರು. ಪ್ರೀತಿ ಆರ್ಕೇಡ್‌ನ ಗಂಗಾಧರ ರೈ, ಪ್ರಥಮ್ ಕಾಮತ್ ಮತ್ತು ಸಂದೇಶ್, ಯೂಸುಫ್, ಮೆಡಿಕೇರ್ ಮೆಡಿಕಲ್‌ನ ಜಯಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಹರ್ಷ ಸಂಸ್ಥೆಯು ಪ್ರತೀ ಬಾರಿ ಗ್ರಾಹಕರೆಲ್ಲರನ್ನು ಆಹ್ವಾನಿಸಿ ಸಡಗರದಿಂದ ಆಚರಿಸುವ, ಹಲವು ವಿಶೇಷತೆಗಳ ‘ಹರ್ಷೋತ್ಸವ’ಕ್ಕೆ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಾ ನೆಚ್ಚಿನ ಶಾಪಿಂಗ್ ಹಬ್ಬವಾಗಿ ಆಚರಿಸಲ್ಪಡುತ್ತಿರುವ ಹರ್ಷೋತ್ಸವದಲ್ಲಿ ಗ್ರಾಹಕರಿಗೆ ಹಲವು ಕೊಡುಗೆಗಳು ಲಭ್ಯವಿದೆ.