ಪುತ್ತೂರು: ಪವಿತ್ರ ರಂಝಾನ್ ತಿಂಗಳಿನಲ್ಲಿ ಬಡಗನ್ನೂರು ಗ್ರಾಮದ ಮುಂಡೋಳೆ ಬದ್ರಿಯಾ ಜುಮಾ ಮಸೀದಿಯ ಆವರಣದಲ್ಲಿ ಪ್ರತಿನಿತ್ಯ ಅದ್ದೂರಿಯಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಗುತ್ತಿದೆ. ಊರ ದಾನಿಗಳ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳುವ ಈ ಸಂಗಮದಲ್ಲಿ ಪ್ರತಿನಿತ್ಯ ಊರ-ಪರವೂರ ಹಿರಿಯ-ಕಿರಿಯ ನೂರಾರು ಉಪವಾಸಿಗರು ಪಾಲ್ಗೊಳ್ಳುತ್ತಿದ್ದಾರೆ. ರಂಝಾನ್ ಅಂತ್ಯದವರೆಗೂ ಭರ್ಜರಿಯಾಗಿಯೇ ಇಫ್ತಾರ್ ಸಂಗಮವು ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ತಿಳಿಸಿದೆ.