ರಾಮಕುಂಜ: ಕೊಯಿಲ ಪಾಣಿಗ ನಿವಾಸಿ ಸಮೀಕ್ಷಾ ಅವರು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಟಪಾಡಿ ತ್ರಿಷಾ ವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿನಿಯಾಗಿರುವ ಸಮೀಕ್ಷಾ 2025ರ ಜನವರಿಯಲ್ಲಿ ನಡೆದ ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು 400ರಲ್ಲಿ 225 ಅಂಕ ಪಡೆದುಕೊಂಡು ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದಾರೆ. ಕೊಯಿಲ ಗ್ರಾಮದ ಪಾಣಿಗ ನಿವಾಸಿ ಸದಾನಂದ ಮತ್ತು ಶಶಿಕಲಾ ದಂಪತಿ ಪುತ್ರಿಯಾಗಿರುವ ಸಮೀಕ್ಷಾ ಕೊಯಿಲ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ್ಲಿ ಪ್ರೌಢಶಿಕ್ಷಣ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಪ.ಪೂ.ಶಿಕ್ಷಣ ಪಡೆದಿರುತ್ತಾರೆ.