ಬೆಳ್ಳಾರೆ:ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು ಮತ್ತು ಕಾಮಧೇನು ಸೌಹಾರ್ಧ ಸಹಕಾರ ಸಂಘ ನಿ ಬೆಳ್ಳಾರೆ ಇದರ ಅಧ್ಯಕ್ಷರಾಗಿ ಆಯ್ಕೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಕೂಸಪ್ಪ ಗೌಡ ಮುಗುಪ್ಪು ಇವರುಗಳನ್ನು ಮಾ.4 ರಂದು ನಡೆದ ಬೆಳ್ಳಾರೆ ಶಾಖಾ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಸದಸ್ಯರಾದ ರವಿನಾಥ ಮಡ್ತಿಲ, ಕಮಲಾವತಿ ಏನ್ ಎಸ್, ಪ್ರಶಾಂತ್ ತಂಟೆಪ್ಪಾಡಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ,ಶಾಖಾ. ಮೆನೇಜರ್ ಕಾರ್ತಿಕ್ ಎಂ, ಸಿಬ್ಬಂದಿಗಳಾದ ಶಿವಕುಮಾರ್, ಭರತ್ ಕುಮಾರ್, ಯಶ್ವಿತ್, ಉಪಸ್ಥಿತರಿದ್ದರು.