ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಒಳಮೊಗ್ರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦ಕ್ಕೆ ಒಳಮೊಗ್ರು ೧ನೇ ವಾರ್ಡ್, ಮುಡಾಲ ಮರಾಠಿ ಸಭಾಭವನದಲ್ಲಿ ೧೧ಕ್ಕೆ ೨ನೇ ವಾರ್ಡ್‌ನ ವಾರ್ಡುಸಭೆ
ಕೌಕ್ರಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮಸಭೆ, ಮಧ್ಯಾಹ್ನ ೧೨.೩೦ಕ್ಕೆ ವಿಕಲಚೇತನರ ವಿಶೇಷ ಗ್ರಾಮಸಭೆ, ಅಪರಾಹ್ನ ೨.೩೦ಕ್ಕೆ ಮಹಿಳಾ ಗ್ರಾಮಸಭೆ
ತೆಂಕಿಲ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಬೆಳಿಗ್ಗೆ ೧೦ಕ್ಕೆ ವ್ಯವಹಾರ ಎಂಬ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್‍ಯಕ್ರಮದ ಉದ್ಘಾಟನೆ
ದರ್ಬೆ ನಯಾ ಚಪ್ಪಲ್ ಬಜಾರ್‌ನಲ್ಲಿ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಆಫರ್, ವರ್ಷದ ಗ್ರಾಹಕ ಅವಾರ್ಡ್, ಸಾಧಕರಿಗೆ ಸನ್ಮಾನ, ರೋಟರಿ ಕ್ಲಬ್ & ರೋಟರ್‍ಯಾಕ್ಟ್ ಕ್ಲಬ್‌ನಿಂದ ಅಂಗನವಾಡಿ ಮಕ್ಕಳಿಗೆ ಪಾದರಕ್ಷೆ ವಿತರಣೆ, ಜಿಡೆಕಲ್ಲು ಸ.ಪ್ರ.ದ ಕಾಲೇಜಿಗೆ ನಾಮಫಲಕ ಕೊಡುಗೆ, ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಯೋಜನೆ, ಕ್ವಿಜ್
ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಜನ್ಮದಿನದ ಪ್ರಯುಕ್ತ ಅನ್ನಸಂತರ್ಪಣೆ
ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ಮೆಚ್ಚಿ ಜಾತ್ರೆಯ ಗೊನೆ ಕಡಿಯುವುದು
ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ಕ್ಕೆ ಜಾತ್ರೋತ್ಸವದ ಚಪ್ಪರ ಮುಹೂರ್ತ, ಸಂಜೆ ೬ಕ್ಕೆ ನೂತನ ಆಡಳಿತ ಮಂಡಳಿ, ಗ್ರಾಮಸ್ಥರ ಸಭೆ
ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಬಿಂಬಸಂಕೋಚ, ಅಷ್ಟಬಂಧಲೇಪನ, ೧೧ಕ್ಕೆ ಪುನಃಪ್ರತಿಷ್ಠೆ, ಪ್ರತಿಷ್ಠಾ ಹೋಮ, ಲಕ್ಷ್ಮೀಹೃದಯಮಂತ್ರ ಹೋಮ, ಮಹಾಪೂಜೆ, ಸಂಜೆ ಚಕ್ರಾಬ್ಜ ಮಂಡಲಪೂಜೆ, ಕಲಶ ಮಂಡಲ ರಚನೆ, ಮಹಾಪೂಜೆ
ಕೆಯ್ಯೂರು ಗ್ರಾಮ ಮಾಡಾವು ಶ್ರೀ ಸುಬ್ರಹ್ಮಣ್ಯ ದೇವರು ಬೊಳಿಕಲ ಮಠದಲ್ಲಿ ಬೆಳಿಗ್ಗೆ ೬ರಿಂದ ಮಹಾಗಣಪತಿ ಹೋಮ, ೭.೩೭ರಿಂದ ಶ್ರೀ ಸುಬ್ರಹ್ಮಣ್ಯ ದೇವರ ಪುನರ್‌ಪ್ರತಿಷ್ಠೆ ಜೀವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ
ನಿಡ್ಪಳ್ಳಿ ಗ್ರಾಮ ಚೆಲ್ಯರಮೂಲೆ ಕುಟುಂಬರ ಮನೆಯಲ್ಲಿ ಬೆಳಿಗ್ಗೆ ೯ಕ್ಕೆ ಗಣಹೋಮ, ೧೧ಕ್ಕೆ ನಾಗತಂಬಿಲ, ಮಧ್ಯಾಹ್ನ ೧೨ಕ್ಕೆ ಮುಡಿಪು ಪೂಜೆ, ಅನ್ನಸಂತರ್ಪಣೆ, ಸಂಜೆ ೭ಕ್ಕೆ ಕಲ್ಲುರ್ಟಿ ದೈವದ ನೇಮ, ವರ್ಣರ ಪಂಜುರ್ಲಿ, ಮಣಿಪಾಂತಿ ಪಂಜುರ್ಲಿ ದೈವಗಳ ನೇಮ
ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ಕೃಷ್ಣಪುರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ
ಗೃಹಪ್ರವೇಶ
ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ಎಂಬಲ್ಲಿ ಮಿತ್ತಡ್ಕ ಉಮೇಶ್ ಎಂ.ರವರ ನೂತನವಾಗಿ ನಿರ್ಮಿಸಿರುವ `ಶ್ರೀಸುಧಾ’ದ ಗೃಹಪ್ರವೇಶ
ಶುಭವಿವಾಹ
ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಕುಡ್ಚಿಲ ಶ್ರೀ ಗುರುಕೃಪಾದಲ್ಲಿ ಪುತ್ತೂರು ತಾಲೂಕು ನಿಡ್ಪಳ್ಳಿ ಕುಡ್ಚಿಲ ಶಿವರಾಮ ಹೊಳ್ಳರ ಪುತ್ರಿ ಕೃಷ್ಣಪ್ರಸಾದ ಮತ್ತು ದಾವಣಗೆರೆ, ದೇವರಮನೆ ರೇವಣ್ಣರವರ ಪುತ್ರಿ ಸುಧಾರವರ ವಿವಾಹ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೆಲ್ಲಾಳಿ ರಾಮ ನಾಯ್ಕರ ಪುತ್ರಿ ಪೂರ್ಣಿಮ ಕೆ. ಮತ್ತು ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸುಳ್ಯಪದವು ಏರಾಜೆ ಶಿವಪ್ಪ ನಾಯ್ಕರ ಪುತ್ರ ಪ್ರಕಾಶರವರ ವಿವಾಹ ಹಾಗೂ ಮಧ್ಯಾಹ್ನ ವರನ ಮನೆಯಲ್ಲಿ ಆರತಕ್ಷತೆ