ಮಾಡ್ತಡ್ಕದಲ್ಲಿ ನಡೆದ ಸ್ಪೋಟ ಪ್ರಕರಣ – ಇಬ್ಬರ ವಿರುದ್ಧ ಪ್ರಕರಣ ದಾಖಲು

0


ವಿಟ್ಲ: ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಮಾಡ್ತಡ್ಕ ಕಲ್ಲು ಸ್ಪೋಟಿಸಲು ತಂದಿಟ್ಟಿದ್ದ ಸ್ಪೋಟಕ ಸಿಡಿದು ಹಾನಿ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರೆಯ ಸಂಬಂದಪಟ್ಟ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳದ ಶ್ರೀ ರಾಮ್ ಕನ್‌ಸ್ಟ್ಟ್ರಕ್ಷನ್ ನ ಅಶೋಕ ಮತ್ತು ಅದರ ಬ್ಲಾಸ್ಟರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್.ಎಸ್. ಕ್ರೆಶರ್ ಗೇ ಸೇರಿದ ಕೋರೆಯ ಸಮೀಪದಲ್ಲೇ ಮಾ.೪ರಂದು ಘಟನೆ ನಡೆದಿದ್ದು, ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ ೨೦೦ ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಇಡಲಾಗಿತ್ತು. ಬಿಸಿಲಿನ ಶಾಖದಿಂದ ೧.೩೦ರ ಸುಮಾರಿಗೆ ಅವುಗಳು ಏಕಾಏಕಿ ಸ್ಪೋಟಗೊಂಡಿತ್ತು.

ಸ್ಪೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿತ್ತು ಮಾತ್ರವಲ್ಲದೆ ೧ಕಿ.ಮೀ. ಆಸುಪಾಸಿನ ಸುಮಾರು ೧೫ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು. ಹತ್ತಿರದ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಮಾಡಿನ ಹಂಚು, ಶೀಟುಗಳು ಪುಡಿಪುಡಿಯಾಗಿ ಬಿದ್ದಿದೆ. ಮಾ.೪ರಂದು ಮಧ್ಯಾಹ್ನ ಸಮಯ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್.ಎಸ್.ಕೋರೆಯ ಗಣಿಗಾರಿಕೆಗಾಗಿ ಬೇಕಾಗಿರುವ ಅಪಾಯಕಾರಿಯಾದ ಸ್ಪೋಟಕಗಳನ್ನು ಬಂಟ್ವಾಳದ ಶ್ರೀರಾಮ್ ಕನ್‌ಸ್ಟ್ರಕ್ಷನ್‌ನ ಅಶೋಕ ಮತ್ತು ಅದರ ಬ್ಲಾಸ್ಟರ್ ಕೆಲಸ ಮಾಡುತ್ತಿದ್ದಾತ, ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್.ಎಸ್ ಕೋರೆಯ ಬಳಿಯಿರುವ ಮೋನಪ್ಪ ಪೂಜಾರಿ ಅವರ ಬಾಬ್ತು ಜಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜವಾಬ್ದಾರಿಯಿಂದ ಇಟ್ಟಿದ್ದು,ಸದ್ರಿ ಸ್ಪೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡು ಸುತ್ತಮುತ್ತಲಿನ ಮರಗಿಡಗಳು ಛಿದ್ರಗೊಂಡಿರುತ್ತದೆ ಹಾಗೂ ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಎಂಬವರುಗಳ ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಗಳು ಸಂಭವಿಸಿರುವುದಿಲ್ಲ ಎಂದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ:9B Explossive Act 1884 ಮತ್ತು 288BNS2023 ರಂತೆ ಪ್ರಕರಣ (ಅ.ಕ್ರ. 36/2025) ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here