ದರ್ಬೆ ನಯಾ ಚಪ್ಪಲ್ ಬಜಾರ್ ನವೀಕೃತಗೊಂಡು ಒಂದು ದಿನದ ವಿಶೇಷ ಆಫರ್‌ಗಳೊಂದಿಗೆ ಪ್ರಥಮ ವಾರ್ಷಿಕೋತ್ಸವ ಆಚರಣೆ

0

ಪುತ್ತೂರು: ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ೨೯ ವರ್ಷಗಳಿಂದ ಹವಾನಿಯಂತ್ರಿತ ಪಾದರಕ್ಷೆ ಮಳಿಗೆ ನಯಾ ಚಪ್ಪಲ್ ಬಜಾರ್ ಮೂಲಕ ವ್ಯವಹರಿಸುತ್ತಾ ಬಂದಿರುವ ಈ ಮಳಿಗೆಯು ಕಳೆದ ವರ್ಷ ನವೀಕೃತಗೊಂಡು ಮಾ.೬ ರಂದು ಪ್ರಥಮ ವಾರ್ಷಿಕೋತ್ಸವವನ್ನು ಗ್ರಾಹಕರಿಗೆ ಒಂದು ದಿನದ ವಿಶೇಷ ವಿವಿಧ ಭರ್ಜರಿ ಆಫರ್‌ಗಳೊಂದಿಗೆ ಆಚರಿಸಲಾಯಿತು.


ರಫೀಕ್‌ರವರಲ್ಲಿ ಸೇವೆಯ ಪ್ರಾಂಜಲ ಮನಸ್ಸು, ಅರ್ಪಣಾ ಮನೋಭಾವವಿದೆ-ಪುರಂದರ ಹೆಗ್ಡೆ:
ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ನಾನು ಮತ್ತು ರಫೀಕ್‌ರವರು ಕ್ಲಾಸ್‌ಮೇಟ್ ಆಗಿದ್ದು ಬೆಳ್ತಂಗಡಿಯಲ್ಲಿ ಪಿಯುಸಿ ವ್ಯಾಸಂಗವನ್ನು ಮಾಡಿರುತ್ತೇವೆ. ರಫೀಕ್‌ರವರು ಒಳ್ಳೆಯ ಮನುಷ್ಯ ಹಾಗೂ ಒಳ್ಳೆಯ ಲೀಡರ್ ಆಗಿದ್ದಾರೆ. ರಫೀಕ್‌ರವರು ತಮ್ಮ ಉದ್ಯಮದೊಂದಿಗೆ ಸಮಾಜದಲ್ಲಿ ಸಮಾಜಮುಖಿ ಸೇವೆಯನ್ನು ಮಾಡುವ ಪ್ರಾಂಜಲ ಮನಸ್ಸಿನವರಾಗಿದ್ದಾರೆ ಜೊತೆಗೆ ಅವರಲ್ಲಿ ಅರ್ಪಣಾ ಮನೋಭಾವನೆ ಅಡಗಿದೆ. ಸಮಾಜದಲ್ಲಿ ಬಹಳಷ್ಟು ಮಂದಿ ಶ್ರೀಮಂತರು ಇದ್ದಾರೆ ಆದರೆ ಸಮಾಜಕ್ಕೆ ತನ್ನಿಂದಾಗುವ ಸೇವೆ ಕೊಡುವವರು ವಿರಳವಾಗಿದ್ದರೂ ರಫೀಕ್‌ರವರ ಸಮಾಜ ಸೇವೆಯು ಇವರಿಗೆ ಮಾದರಿಯಾಗಿದೆ ಎಂದರು.


ಸಮಾಜಕ್ಕೆ ಸಂದೇಶ ನೀಡುವ ಮಾದರಿ ಕಾರ್ಯಕ್ರಮವಾಗಿದೆ-ದಾಮೋದರ್ ಕೆ.ಎ:
ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ, ಮಾತನಾಡಿ, ರಫೀಕ್ ಎಂ.ಜಿರವರು ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲಿ ಅದು ವೈಶಿಷ್ಟ್ಯಪೂರ್ಣವಾಗಿರುತ್ತದೆ ಮತ್ತು ಸಮಾಜಕ್ಕೆ ಸಂದೇಶ ನೀಡುವ ಮಾದರಿ ಕಾರ್ಯಕ್ರಮವಾಗಿರುತ್ತದೆ. ತಾನು ದುಡಿದು ಯಾರಿಗೂ ತೊಂದರೆ ಮಾಡದೆ ಸ್ವಾಭಿಮಾನಿಯಾಗಿ ಬದುಕಬೇಕು ಎನ್ನುವ ತುಡಿತದೊಂದಿಗೆ ಬದುಕುವ ಹಿರಿಯರಾದ ಬಾಬು ಗೌಡರವರನ್ನು ರಫೀಕ್‌ರವರು ಗುರುತಿಸಿ ಸನ್ಮಾನಿಸಿರುವುದು ರಫೀಕ್‌ರವರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.


ರಫೀಕ್ ಎಂ.ಜಿರವರೋರ್ವ ಗ್ರಾಹಕ ಸ್ನೇಹಿ ಎನಿಸಿಕೊಂಡಿದ್ದಾರೆ-ಆಸ್ಕರ್ ಆನಂದ್:
ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಆಸ್ಕರ್ ಆನಂದ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ಆತ್ಮೀಯರಾಗಿರುವ ರಫೀಕ್ ಎಂ.ಜಿರವರು ಮಾಡುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿವಿಧತೆಯಿದೆ ಮಾತ್ರವಲ್ಲ ಮಳಿಗೆಗೆ ಆಗಮಿಸುವ ಗ್ರಾಹಕರಲ್ಲಿ ಸಂತೋಷದಿಂದ ಮಾತನಾಡಿ ಓರ್ವ ಗ್ರಾಹಕ ಸ್ನೇಹಿಯಾಗಿದ್ದಾರೆ ಅವರು. ರೋಟರಿಯು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅದಕ್ಕೆ ಪೂರಕವಾಗಿ ರಫೀಕ್‌ರವರು ಕಳೆದ ಇಪ್ಪತ್ತು ವರ್ಷಗಳಿಂದ ಅಂಗನವಾಡಿಗಳಿಗೆ ಉಚಿತವಾಗಿ ಪಾದರಕ್ಷೆಗಳನ್ನು ನೀಡುತ್ತಾ ಬಂದಿದ್ದು ಇದು ರೋಟರಿಗೆ ಜಿಲ್ಲಾ ಪ್ರಾಜೆಕ್ಟ್ ಆಗಿ ಮೂಡಿ ಬಂದಿದೆ ಎಂದರು.


ಗ್ರಾಹಕರ ಅನುಕೂಲತೆಗೋಸ್ಕರ ಮಳಿಗೆ ಮೇಲ್ದರ್ಜೆಗೆ-ಭುಜಂಗ ಆಚಾರ್ಯ:
ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಭುಜಂಗ ಆಚಾರ್ಯ ಮಾತನಾಡಿ, ೨೦೧೯-೨೦ರಲ್ಲಿ ತಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲೂ ರಫೀಕ್‌ರವರು ಅಂಗನವಾಡಿಗಳಿಗೆ ಪಾದರಕ್ಷೆ, ಕುಡಿಯುವ ನೀರಿನ ವ್ಯವಸ್ಥೆಗೆ ಪ್ರೋತ್ಸಾಹ ನೀಡಿರುತ್ತಾರೆ. ವರ್ಷದ ಹಿಂದೆ ಈ ಮಳಿಗೆಯು ಗ್ರಾಹಕರ ಅನುಕೂಲತೆಗೋಸ್ಕರ ಮೇಲ್ದರ್ಜೆಗೇರಿಸಿದ್ದಾರೆ ಎಂದರು.


ರೋಟರ್‍ಯಾಕ್ಟ್ ಪುತ್ತೂರು ಕ್ಲಬ್‌ಗೆ ರಫೀಕ್‌ರವರ ಸೇವೆ ಅನನ್ಯ-ಸುಬ್ರಹ್ಮಣಿ:
ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಅಧ್ಯಕ್ಷ ಸುಬ್ರಹ್ಮಣಿ ಮಾತನಾಡಿ, ರೋಟರ್‍ಯಾಕ್ಟ್ ಕ್ಲಬ್‌ನ ಪದಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂದರ್ಭದಲ್ಲಿ ಅಂಗನವಾಡಿ ಪುಟಾಣಿಗಳಿಗೆ ಪಾದರಕ್ಷೆ ನೀಡುವ ಯೋಜನೆಯನ್ನು ಹಮ್ಮಿಕೊಳ್ಳುವುದರ ಬಗ್ಗೆ ಕ್ಲಬ್ ಸದಸ್ಯರಲ್ಲಿ ಹಾಗೂ ರಫೀಕ್‌ರವರಲ್ಲಿ ಮಾತನಾಡಿದ್ದೇವು. ಕೂಡಲೇ ಅಂಗನವಾಡಿಗಳ ಲಿಸ್ಟ್ ತಯಾರಿಸಿ ಕೊಡಿ ಪಾದರಕ್ಷೆಗಳನ್ನು ತಾನು ಉಚಿತವಾಗಿ ನೀಡುತ್ತೇನೆ ಎಂದು ಹೇಳಿ ಪಾದರಕ್ಷೆಗಳನ್ನು ಉಚಿತವಾಗಿ ನೀಡಿದ್ದು ರೋಟರ್‍ಯಾಕ್ಟ್ ಕ್ಲಬ್‌ಗೆ ಅವರ ಸೇವೆ ಅನನ್ಯ ಎಂದರು.


ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸ/ಕ್ವಿಜ್ ಸ್ಪರ್ಧೆ:
ವಾರ್ಷಿಕೋತ್ಸವದ ಪ್ರಯುಕ್ತ ಮಾ.೬, ೭ ರಂದು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಬಹುಮಾನ ನೀಡಲಾಯಿತು ಜೊತೆಗೆ ಸ್ಥಳದಲ್ಲಿ ಹಾಜರಿದ್ದವರಿಗೆ ಪ್ರಶ್ನೆಗಳ ಗೊಂಚಲಿನ ಕ್ವಿಜ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ತಕ್ಷಣ ಉತ್ತರ ನೀಡಿದವರಿಗೆ ಸ್ಥಳದಲ್ಲಿಯೇ ಮಳಿಗೆಯ ಪಾಲುದಾರ ಎಂ.ಜಿ ರಫೀಕ್‌ರವರು ಬಹುಮಾನ ವಿತರಿಸಿದರು.


ಕುಡಿಯುವ ನೀರಿನ ಯೋಜನೆ:
ಮಳಿಗೆಯ ವತಿಯಿಂದ ಮಳಿಗೆಯ ಪಕ್ಕದಲ್ಲಿಯೇ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಕುಡಿಯುವ ನೀರಿನ ಯೋಜನೆಯನ್ನು ಹಾಕಿಕೊಂಡಿದ್ದು, ಇದರ ಉದ್ಘಾಟನೆಯು ಮಾ.೨೮ ರಂದು ರೋಟರಿ ಕ್ಲಬ್ ಪುತ್ತೂರಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ನಡೆಯಲಿರುವುದು ಎಂದು ಮಳಿಗೆಯ ಪಾಲುದಾರ ರಫೀಕ್ ಎಂ.ಜಿರವರು ಹೇಳಿದರು.


ರೋಟರಿ ಪುತ್ತೂರು ಸದಸ್ಯ ಹಾಗೂ ದರ್ಬೆ ಮಂಗಳೂರು ಫರ್ನಿಚರ್‍ಸ್ ಮಾಲಕ ಇಸ್ಮಾಯಿಲ್, ರೋಟರಿ ಕ್ಲಬ್ ಪುತ್ತೂರು ಸದಸ್ಯರಾದ ಜೈರಾಜ್ ಭಂಡಾರಿ, ಎಂ.ಜಿ ರೈ, ವಿ.ಜೆ ಫೆರ್ನಾಂಡೀಸ್, ಎ.ಜೆ ರೈ, ಡಾ.ಅಶೋಕ್ ಪಡಿವಾಳ್, ಉಮಾನಾಥ್ ಪಿ.ಬಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ರಾಮಕೃಷ್ಣ, ಹೆರಾಲ್ಡ್ ಮಾಡ್ತಾ, ಶ್ರೀಧರ್ ಗೌಡ ಕಣಜಾಲು, ದತ್ತಾತ್ರೇಯ ರಾವ್, ಸುಬ್ಬಪ್ಪ ಕೈಕಂಬ, ಬಾಲಕೃಷ್ಣ ಆಚಾರ್ಯ, ಸುಂದರ ಗೌಡ, ಶೈನಿ ಸ್ಟುಡಿಯೋದ ಶಾಂತಕುಮಾರ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಅನೂಪ್ ಟಿ.ವಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಝಾಕ್ ಬಿ.ಎಚ್, ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್,ರೋಟರ್‍ಯಾಕ್ಟ್ ಕ್ಲಬ್ ಪುತ್ತೂರಿನ ವಿನೀತ್, ರಫೀಕ್ ಎಂ.ಜಿರವರ ಹಿರಿಯ ಸಹೋದರ ಎಂ.ಜಿ ರಝಾಕ್ ಹಾಗೂ ಸಹೋದರರು ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮಳಿಗೆಯ ಪಾಲುದಾರ ರಫೀಕ್ ಎಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಮಳಿಗೆಯ ಸಿಬ್ಬಂದಿ ಸುಮಲತಾ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮತ್ತೋರ್ವ ಪಾಲುದಾರ ಸಿದ್ಧೀಕ್, ಸಿಬ್ಬಂದಿಗಳಾದ ಮ್ಯಾನೇಜರ್ ಪ್ರಶಾಂತ್ ಪಿ, ಶಾಫಿ, ಫೈಜಲ್, ದಿನೇಶ್, ಸಫ್ವಾನ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.



ಸನ್ಮಾನ..
ನಯಾ ಚಪ್ಪಲ್ ಬಜಾರ್ ಮಳಿಗೆಯ ಪಾಲುದಾರ ಎಂ.ಜಿ ರಫೀಕ್‌ರವರ ಕ್ಲಾಸ್‌ಮೇಟ್ ಆಗಿರುವ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಕಳೆದ ೨೮ ವರ್ಷಗಳಿಂದ ಮಳಿಗೆಯ ಅಭಿವೃದ್ಧಿಯಲ್ಲಿ ಗ್ರಾಹಕರಾಗಿ ಸಹಕರಿಸುತ್ತಿದ್ದು ಮಳಿಗೆಯ ಮೂಲಕ `ವರ್ಷದ ಗ್ರಾಹಕ ಅವಾರ್ಡ್’ಗೆ ಭಾಜನರಾಗಿರುವ ಶ್ರೀಮತಿ ಸುಲತಾ ರತನ್ ನಾಕ್ ಈಶ್ವರಮಂಗಲ ಹಾಗೂ ತನ್ನ ೧೨ನೇ ವಯಸ್ಸಿನಲ್ಲಿಯೇ ಸೈಕಲ್ ತುಳಿದುಕೊಂಡು ಕೆಲಸಕ್ಕೆ ತೊಡಗಿಸಿಕೊಂಡು ಸೋಜಾ ಸಂಸ್ಥೆಯಲ್ಲಿ ೩೫ ವರ್ಷ, ಪ್ರಸ್ತುತ ಕೃಷ್ಣನಗರದಲ್ಲಿ ಕಳೆದ ೧೨ ವರ್ಷಗಳಿಂದ ಗೂಡಂಗಡಿ ವ್ಯಾಪಾರ ಮಾಡುತ್ತಾ ಬರುತ್ತಿರುವ ೬೭ ವರ್ಷ ಪ್ರಾಯದ ಬಾಬು ಗೌಡರವರುಗಳನ್ನು ಮಳಿಗೆಯ ಪಾಲುದಾರ ರಫೀಕ್‌ರವರು ಗುರುತಿಸಿ ಅವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಅಂಗನವಾಡಿಗಳಿಗೆ ಪಾದರಕ್ಷೆ..
ವಾರ್ಷಿಕೋತ್ಸವದ ಪ್ರಯುಕ್ತ ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ನೆಲ್ಲಿಕಟ್ಟೆ ಹಾಗೂ ತೆಂಕಿಲ ಅಂಗನವಾಡಿಯ ಪುಟಾಣಿಗಳಿಗೆ ನಯಾ ಚಪ್ಪಲ್ ಬಜಾರ್ ವತಿಯಿಂದ ಉಚಿತ ಪಾದರಕ್ಷೆಗಳನ್ನು ಅಲ್ಲಿನ ಶಾಲೆಯ ಶಿಕ್ಷಕಿಯರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ರೋಟರಿ ಪುತ್ತೂರು ಇದೀಗ ೬೦ನೇ ವರ್ಷವನ್ನು ಆಚರಿಸುತ್ತಿದ್ದು, ಈ ೬೦ನೇ ವರ್ಷದ ಅಂಗವಾಗಿ ೬೦ ಅಂಗನವಾಡಿಗಳಿಗೆ ಪಾದರಕ್ಷೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ರಫೀಕ್ ಎಂ.ಜಿರವರು ಹೇಳಿದರು.

ನಾಮಫಲಕ/ಚಿನ್ನದ ನಾಣ್ಯ..
ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂರು ನಾಮಫಲಕಗಳನ್ನು ಮಳಿಗೆಯ ವತಿಯಿಂದ ಕೊಡುಗೆಯಾಗಿ ನೀಡಲಾಗಿದ್ದು, ಇದನ್ನು ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಇದರ ಜೊತೆಗೆ ವಾರ್ಷಿಕೋತ್ಸವ ದಿನದಂದು ಮಳಿಗೆಗೆ ಆಗಮಿಸುವ ಗ್ರಾಹಕ ಬಂಧುಗಳಿಗೆ ಕೂಪನ್ ಮೂಲಕ ಚಿನ್ನದ ನಾಣ್ಯ ವಿಜೇತರಾಗುವ ಅವಕಾಶವನ್ನು ಮಳಿಗೆಯು ಒದಗಿಸಿಕೊಟ್ಟಿದೆ.

LEAVE A REPLY

Please enter your comment!
Please enter your name here