ಪುತ್ತೂರಿಗೆ ಮೆಡಿಕಲ್ ಕಾಲೇಜು ಶಾಸಕರನ್ನು ತೃಪ್ತಿಪಡಿಸುವ, ಪುತ್ತೂರಿನ ಜನರನ್ನು ಮೋಸ ಮಾಡುವ ಕೆಲಸವಾಗಿದೆ – ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಭರವಸೆ ಮಾತ್ರ. ಇದು ಶಾಸಕರ ಒತ್ತಡಕ್ಕೆ ಅವರನ್ನು ತೃಪ್ತಿ ಪಡಿಸುವ ಕೆಲಸ ಮಾತ್ರ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ. ಎಲ್ಲಿಯಾದರೂ ಮೆಡಿಕಲ್ ಕಾಲೇಜು ಬರುವುದಿದ್ದರೆ ಅದಕ್ಕೆ ಇಷ್ಟು ಅನುದಾನ ಕೊಡುತ್ತೇವೆ. ಇಷ್ಟು ಬೆಡ್‌ನ ಆಸ್ಪತ್ರೆ ಕೊಡುತ್ತೇವೆ ಎಂದು ಕೊಡಬೇಕಾಗಿತ್ತು. ಇದು ಯಾವುದೂ ಕೊಡದೆ ಒಟ್ಟು ಪುತ್ತೂರಿನ ಜನರನ್ನು ಮೋಸ ಮಾಡುವ ಕೆಲಸ ಈ ಬಜೆಟ್‌ನಲ್ಲಿ ಆಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಶಾಸಕರು ಮೆಡಿಕಲ್ ಕಾಲೇಜನ್ನು ಮಾಡುವ ಭರವಸೆಯಲ್ಲಿ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಸಹಜವಾಗಿ ಪುತ್ತೂರಿನ ಜನತೆ ಈ ಬಾರಿ ಮೆಡಿಕಲ್ ಕಾಲೇಜು ಆಗುತ್ತದೆ ಎಂದು ವಿಶ್ವಾಸ ಇಟ್ಟಿದ್ದರು. ಅಶೋಕ್ ರೈ ಅವರ ಮಾತಿಗೆ ಈ ರಾಜ್ಯದ ಮುಖ್ಯಮಂತ್ರಿ ಮನ್ನಣೆ ಕೊಡುತ್ತಾರೆ ಎಂದು ನಂಬಿದ್ದರು. ಆದರೆ ಅದು ಟುಸ್ ಆಗಿದೆ. ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅದೇ ವಿಚಾರದಲ್ಲಿ ಇನ್ನೊಂದು ಪ್ರಸ್ತಾಪದಲ್ಲಿ ಚಿತ್ರದುರ್ಗದ ಮೊಳಕಾಲ್ಮೂಗೆ 200 ಬೆಡ್‌ನ ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆಗೆ 400 ಬೆಡ್‌ನ ಆಸ್ಪತ್ರೆಯನ್ನು ಸ್ಥಾಪಿಸಾಗುವುದು ಎಂದು ಉಲ್ಲೇಖಿಸಿದ್ದಾರೆ. ಇದನ್ನು ನೋಡಿದಾಗ ಪುತ್ತೂರಿಗೆ ಭರವಸೆ ಮಾತ್ರ. ಇದು ಶಾಸಕರ ಒತ್ತಡಕ್ಕೆ ಅವರನ್ನು ತೃಪ್ತಿ ಪಡಿಸುವ ಕೆಲಸ ಮಾತ್ರ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ. ಎಲ್ಲಿಯಾದರೂ ಮೆಡಿಕಲ್ ಕಾಲೇಜು ಬರುವುದಿದ್ದರೆ ಅದಕ್ಕೆ ಇಷ್ಟು ಅನುದಾನ ಕೊಡುತ್ತೇವೆ. ಇಷ್ಟು ಬೆಡ್‌ನ ಆಸ್ಪತ್ರೆ ಕೊಡುತ್ತೇವೆ ಎಂದು ಕೊಡಬೇಕಾಗಿತ್ತು. ಇದು ಯಾವುದು ಕೊಡದೆ ಒಟ್ಟು ಪುತ್ತೂರಿನ ಜನರನ್ನು ಮೋಸ ಮಾಡುವ ಕೆಲಸ ಈ ಬಜೆಟ್‌ನಲ್ಲಿ ಆಗಿದೆ. ಬಜೆಟ್‌ನಲ್ಲಿ ಯಾವಾಗಲು ಸ್ಪಷ್ಟತೆ ಇರಬೇಕು. ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರೆ ಕನಸು ಕಾಣುತ್ತಿದ್ದಾರೆ ಎಂಬ ಅರ್ಥ ಎಂದರು. ಯಾವುದೇ ಮೆಡಿಕಲ್ ಕಾಲೇಜು ಮಾಡಬೇಕಾದರೆ 25-26ನೇ ಸಾಲಿನ ಬಜೆಟ್‌ನಲ್ಲಿ ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಇಷ್ಟು ಅನುದಾನ ಇರಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗುವುದು ಎಂದು ಕೊಡಬೇಕು. ಆದರೆ ಇಲ್ಲಿ ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ ಇದರ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದಾರೆ.


ಬಜೆಟ್‌ನಲ್ಲಿ ಟೋಟಲಿ ಪುತ್ತೂರನ್ನು ನೆಗ್ಲೆಟ್ ಮಾಡಲಾಗಿದೆ:
ಯಾವುದೇ ಮೆಡಿಕಲ್ ಕಾಲೇಜು ಬರಬೇಕಾದರೆ ವಿದ್ಯಾರ್ಥಿಗೆ ಅಧ್ಯಯನ ಮಾಡಲು ಮೊದಲು ಪೇಷಂಟ್ ಬೇಕು. ಹಾಗಾಗಿ ಪುತ್ತೂರಿನಲ್ಲಿ 300 ಬೆಡ್‌ನ ಆಸ್ಪತ್ರೆಗೆ ಈಗಾಗಲೆ ನಾವು 240 ಕೋಟಿಯ ಪ್ಲ್ಯಾನ್ ಎಸ್ಟಿಮೇಟ್ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಬಹುಶಃ ಅದನ್ನು ಮುಂದುವರಿಸಿದರೆ ಆಗುತ್ತಿತ್ತು. ಆದರೆ ಅದನ್ನು ಉಲ್ಲೇಖಿಸಿಲ್ಲ. ವಿರಾಜಪೇಟೆಗೆ 400 ಬೆಡ್ ಆಸ್ಪತ್ರೆ, ಮೊಳಕಾಲ್ಮೂಗೆ 200 ಬೆಡ್ ಅಸ್ಪತ್ರೆಯನ್ನು ಸ್ಥಾಪಿಸುವ ಕುರಿತು ಉಲ್ಲೇಖ ಮಾಡಿದ್ದಾರೆ. ಆದರೆ ಪುತ್ತೂರಿನದ್ದನ್ನು ಉಲ್ಲೇಖಿಸಿಲ್ಲ ಯಾಕೆ. ಯಾವಾಗಲು ಮೊದಲು ಆಸ್ಪತ್ರೆ ಮಾಡಿ ಮತ್ತೆ ಮಡಿಕಲ್ ಕಾಲೇಜು ಮಾಡುವುದು. ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಕಡೆ ಮೆಡಿಕಲ್ ಕಾಲೇಜು ಮಾಡುತ್ತಾರೆ. ಯಾಕೆಂದರೆ ಅಲ್ಲಿ ಮೆಡಿಕಲ್ ಆಸ್ಪತ್ರೆ ಇದೆ. ಆದರೆ ಪುತ್ತೂರಿನಲ್ಲಿ ಇರುವುದು ನೂರು ಬೆಡ್‌ನ ಆಸ್ಪತ್ರೆ. ಇವತ್ತು ವಿರಾಜ್‌ಪೇಟೆ ಸಣ್ಣ ತಾಲೂಕು, ಆದರೆ ಪುತ್ತೂರು ನಾಲ್ಕು ತಾಲೂಕಿನ ಉಪವಿಭಾಗ. ಇಲ್ಲಿಗೆ 100 ಬೆಡ್‌ನ ಆಸ್ಪತ್ರೆ. ವಿರಾಜಪೇಟೆಗೆ 400 ಬೆಡ್‌ನ ಆಸ್ಪತ್ರೆ. ಇದರ ಅರ್ಥ ಏನು. ಒಟ್ಟಿನಲ್ಲಿ ಬಜೆಟ್‌ನಲ್ಲಿ ಟೋಟಲಿ ಪುತ್ತೂರನ್ನು ನೆಗ್ಲೆಟ್ ಮಾಡಿದ್ದಾರೆ ಎಂದ ಅವರು ಶಾಸಕರು ಪ್ರತಿ ಸಲ ಎಲ್ಲವನ್ನು ಹೇಳುತ್ತಾರೆ. ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಗೊತ್ತಿಲ್ಲ. ನಾವು ವಸ್ತು ನಿಷ್ಠವಾಗಿ ಮಾತನಾಡುವವರು. ಗಾಳಿಯಲ್ಲಿ ಗುಂಡು ಹೊಡಿಯುವವರು ನಾವಲ್ಲ. ಬಜೆಟ್‌ನಲ್ಲಿ ಇಷ್ಟು ಅನುದಾನ ಇಟ್ಟು ಈ ಆರ್ಥಿಕ ವರ್ಷದಲ್ಲಿ ಆರಂಭ ಮಾಡುತ್ತೇವೆ ಎಂದು ಹೇಳಿದ್ರೆ ಶಾಸಕರು ಸಫಲರಾಗಿದ್ದಾರೆ. ಶಾಸಕರ ಮಾತಿಗೆ ಮುಖ್ಯಮಂತ್ರಿಗಳು ಗೌರವ ಕೊಟ್ಟಿದ್ದಾರೆ ಎಂದು ಹೇಳಬಹುದಿತ್ತು ಎಂದರು.

ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಡಲದ ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಸುರೇಶ್ ಅತ್ರಮಜಲು, ಚಿತ್ರಪ್ರಸಾದ್ ರೈ, ವಿದ್ಯಾಧರ್ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here