ವಿಟ್ಲ: ಹಾಡಹಗಲೇ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಉರಿಮಜಲು ಸಮೀಪದ ದೇವಸ್ಯ ರಸ್ತೆ ತಿರುವಿನಲ್ಲಿ ನಡೆದಿದೆ.

ವಿಟ್ಲ – ಪುತ್ತೂರು ಮುಖ್ಯ ರಸ್ತೆಯ ಉರಿಮಜಲು, ದೇವಸ್ಯ ರಸ್ತೆ ತಿರುವು ಸಮೀಪದ ಗಣೇಶ್ ಗೌಡ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕಳ್ಳತನ ನಡೆದಿದ್ದು, ಏಳೂವರೆ ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್.ಇ , ಎಸ್.ಐ. ವಿದ್ಯಾರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.