ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಕಳೆದ ೩ ದಶಕಗಳಿಂತಲೂ ಹೆಚ್ಚು ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಚಂದ್ರಕಾಂತ ಶಾಂತಿವನರವರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು ಅವರ ಉತ್ತರ ಕ್ರಿಯಾಧಿ ಸದ್ಗತಿ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮಾ.೮ ರಂದು ಪರ್ಪುಂಜ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಿತು.

ಆರಂಭದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ರಂಗಭೂಮಿ ಕಲಾವಿದ ಸುಂದರ ರೈ ಮಂದಾರರವರು ಚಂದ್ರಕಾಂತ ಶಾಂತಿವನರ ಬಗ್ಗೆ ಮಾತನಾಡಿ ಅವರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತರವರ ತಂದೆ ನಾರಾಯಣ ಪೂಜಾರಿ ಎಂ.ಎಸ್, ತಾಯಿ ಪ್ರೇಮ,ಪತ್ನಿ ಅನಿತಾ, ಪುತ್ರರಾದ ಅಂಚಿತ್, ನಿಶ್ಚಲ್, ಸಹೋದರಿ ವಿನುತಾ, ಬಾವ ಚಂದ್ರಶೇಖರ್ ಸೇರಿದಂತೆ ಕುಟುಂಬಸ್ಥರಾದ ಪ್ರದೀಪ್ ಶಾಂತಿವನ, ಪುಷ್ಪರಾಜ್, ದೀಪಕ್, ಗಂಗಾಧರ, ತ್ರಿವೇಣಿ ಪೆರ‍್ವೋಡಿ,ಪ್ರಕಾಶ್ ಮಂಗಳೂರು, ದಯಾನಂದ್, ರಜನೀಶ್, ಕರುಣಾಕರ ಶಾಂತಿವನ, ಗಿರೀಶ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಚಂದ್ರಕಾಂತ ಶಾಂತಿವನರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಬೂಡಿಯಾರ್ ಗ್ಯಾಸ್ ಮಾಲಕರು, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಅಕ್ಷಯ ಕಾಲೇಜ್‌ನ ಸಂಚಾಲಕ, ಉದ್ಯಮಿ ಜಯಂತ ನಡುಬೈಲ್, ಕುಕ್ಕುಮುಗೇರು ಶ್ರೀ ಕ್ಷೇತ್ರದ ಮೊಕ್ತೇಸರರಾದ ಚಿಕ್ಕಪ್ಪ ನಾಕ್ ಅರಿಯಡ್ಕ, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ರೈ ಮಾರ್ತ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ರಾಜರಾಮ್ ಉಪ್ಪಿನಂಗಡಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ನಿವೃತ್ತ ಪ್ರಾಂಶುಪಾಲ ಜತ್ತಪ್ಪ ರೈ, ಕುಂಬ್ರ ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್ ರೆಂಜ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಉದಯ ಕುಮಾರ್ ಕೋಲಾಡಿ, ಬಿಜೆಪಿ ಎಸ್‌ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಕಾಂಗ್ರೆಸ್ ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕೃಷಿಕ ಸಮಾಜ ಜಿಲ್ಲಾ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷರುಗಳಾದ ರಾಜೇಶ್ ರೈ ಪರ್ಪುಂಜ, ಉಷಾ ನಾರಾಯಣ್, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು, ಗೌರವ ಸಲಹೆಗಾರರಾದ ಉದ್ಯಮಿ ಮೋಹನದಾಸ ರೈ ಕುಂಬ್ರ, ತಿಲಕ್ ರೈ ಕುತ್ಯಾಡಿ,ಸುಧಾಕರ ರೈ ಕುಂಬ್ರ. ರಾಜ್‌ಪ್ರಕಾಶ್ ರೈ ಕುಂಬ್ರ, ಅಶೋಕ್ ಕುಮಾರ್ ತ್ಯಾಗರಾಜನಗರ, ಕರುಣಾ ರೈ ಬಿಜಳ, ಜಯಚಂದ್ರ ನಿರಾಳ, ಆದರ್ಶ ರೈ ನಿರಾಳ, ಗ್ರಾಮ ಆಡಳಿತ ಸಹಾಯಕ ಶ್ರೀಧರ್, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಕುಂಬ್ರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರಮೇಲು, ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕಂಪ, ಸಿಬ್ಬಂದಿ ಪ್ರಮಿತಾ, ನಿರ್ದೇಶಕರುಗಳಾದ ಸುಷ್ಮಾ ಸತೀಶ್, ಧನಂಜಯ್, ವಿಜಯ ಕುಮಾರ್, ವಸಂತ ಬಂಬಿಲ, ನೇಮಿರಾಜ್ ಕುರಿಕ್ಕಾರ, ನಿವೃತ್ತ ಸೈನಿಕ ಶ್ರೀನಿವಾಸ ರೈ ಕುಂಬ್ರ, ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ, ಒಳಮೊಗ್ರು ಪಂಚಾಯತ್ ಸದಸ್ಯರುಗಳಾದ ಮಹೇಶ್ ರೈ, ವಿನೋದ್ ಶೆಟ್ಟಿ ಮುಡಾಲ, ಕುಂಬ್ರ ಸಿಎ ಬ್ಯಾಂಕ್ ನಿರ್ದೇಶಕ ವಿನೋದ್ ಶೆಟ್ಟಿ ಅರಿಯಡ್ಕ ಸೇರಿದಂತೆ ಚಂದ್ರಕಾಂತ ಶಾಂತಿವನರವರ ಕುಟುಂಬಸ್ಥರು, ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಬಂಧುಗಳು ಭಾಗವಹಿಸಿ ಅವರ ಆತ್ಮಕ್ಕೆ ಅಂತಿಮ ನಮನ ಸಲ್ಲಿಸಿದರು.