ಬಡಗನ್ನೂರು: ಪಡುವನ್ನೂರು ಗ್ರಾಮದ ಪೂಜಾರಿಮೂಲೆ ವಿಶ್ವನಾಥ ಪೂಜಾರಿ (ನಾಟಿವೈದ್ಯ)ರವರ ಮನೆಯಲ್ಲಿ ಶ್ರೀ ವೈದ್ಯನಾಥ ಸ್ವಾಮಿಗೆ ತಂಬಿಲ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಮಾ.8ರಂದು ನಡೆಯಿತು.
ಮಾ.8ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, ನಡೆದು ಬಳಿಕ ಶ್ರೀ ವೈದ್ಯನಾಥ ಸ್ವಾಮಿಗೆ ತಂಬಿಲ ಸೇವೆ ನಡೆಯಿತು. ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿತು.
ಈ ಸಂದರ್ಭದಲ್ಲಿ ಮನೆಯವರಾದ ನಾಟಿ ವೈದ್ಯ ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಮೋಹಿನಿ ಹಾಗೂ ಸಿಂಧೂ ಪೂಜಾರಿಮೂಲೆ ಪಡುಮಲೆ ಹಾಗೂ ಗಣ್ಯರು ಮತ್ತು ಊರಿನವರು ಭಾಗವಹಿಸಿದ್ದರು.