ಸಾಹಿತ್ಯಾಭಿರುಚಿಯಿದ್ದು ಶ್ರಮದ ಬೆಸುಗೆಯಿದ್ದಲ್ಲಿ ಮಾತ್ರ ಕಾವ್ಯಗಳು ಮೂಡಿ ಬರಲು ಸಾಧ್ಯ- ಬಿ. ಪುರಂದರ ಭಟ್
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಪುತ್ತೂರು ಸಹಕಾರದೊಂದಿಗೆ, ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಸಂಯೋಜನೆಯಲ್ಲಿ, ಕರ್ನಾಟಕ ಸಂಘ ಪುತ್ತೂರು ಆಶ್ರಯದಲ್ಲಿ, ಅನುರಾಗ ವಠಾರ ಪುತ್ತೂರು ಇಲ್ಲಿ ಮಾ.8ರಂದು ಯುವಕವಿ ನಾರಾಯಣ ಕುಂಬ್ರರವರ ಹನಿದನಿ ಕವನ ಸಂಕಲನ ಕೃತಿ ಬಿಡುಗಡೆ ಸಮಾರಂಭ ನಡೆಯಿತು.ದೀಪ ಬೆಳಗಿಸಿ ಉದ್ಘಾಟಿಸಿ ಲೇಖಕ, ಕವಿ, ಸಂಘಟಕ, ಚಿಂತಕ, ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷ ಬಿ. ಪುರಂದರ ಭಟ್ ಮಾತನಾಡಿ “ಓದುವುದರಿಂದ ಬರೆಯುವ ಶಕ್ತಿ ಹೆಚ್ಚುತ್ತದೆ, ಓದುವ ಹವ್ಯಾಸವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಸಾಹಿತ್ಯಾಭಿರುಚಿಯಿದ್ದು ಶ್ರಮದ ಬೆಸುಗೆಯಿದ್ರೆ ಮಾತ್ರ ಕಾವ್ಯಗಳು ಮೂಡಿ ಬರಲು ಸಾಧ್ಯವೆಂದರು.

ಹನಿದನಿ… ಇದು ಬರಹಗಳ ಮಣಿ ಕವನ ಸಂಕಲನವನ್ನು ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಬಿಡುಗಡೆಗೊಳಿಸಿ ನಾರಾಯಣ ಕುಂಬ್ರರವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿರುವವರು ಇವರ ಬರಹದ ಪಯಣ ಇನ್ನಷ್ಟು ಎತ್ತರಕ್ಕೇರಲಿಯೆಂದು ಹರಸಿದರು.
ಗಝಲ್ ಕವಿ,ಲೇಖಕ, ಕೆನರಾ ಕಾಲೇಜು ಮಂಗಳೂರು ಇದರ ಉಪನ್ಯಾಸಕ ರಘು ಇಡ್ಕಿದು ಮಾತನಾಡಿ “ಕವನಗಳು ಎಂದರೆ ಮೂಗು ಮುರಿಯುವವರ ನಡುವೆ ಮತ್ತೆ ಮತ್ತೆ ಹುಟ್ಟುವ ಕವಿತೆಗಳದ್ದು ಸಹಜ ಜನನ.ಅದು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುತ್ತದೆ” ಎಂಬುದಾಗಿ ಕೃತಿ ಪರಿಚಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಹಿಸಿ ಮಾತನಾಡಿ “ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಎಲ್ಲಾ ಸಾಹಿತ್ಯ ಸಂಘಟನೆಗಳಿಗೆ ಮಾತೃ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.ನಾರಾಯಣ ಕುಂಬ್ರರವರು ಉತ್ತಮ ಸಂಘಟಕ ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಬೆನ್ನೆಲುಬು ಅವರಿಂದ ಇನ್ನಷ್ಟು ಸಾಹಿತ್ಯ ಸೇವೆಗಳಾಗಲಿ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಪುತ್ತೂರು ಇದರ ಅಧ್ಯಕ್ಷ ಕಡಮಜಲು ಸುಭಾಸ್ ರೈ, ಸ. ಪ. ಪೂ ಕಾಲೇಜು ಕೊಣಾಲು ಇಲ್ಲಿನ ಕನ್ನಡ ಉಪನ್ಯಾಸಕಿ, ಸಾಹಿತಿ ಸುಪ್ರೀತಾ ಚರಣ್ ಪಾಲಪ್ಪೆ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಅಧ್ಯಕ್ಷೆ ಶ್ರೀಕಲಾ ಕಾರಂತ್ ಅಳಿಕೆ ಸಂದರ್ಭೋಚಿತವಾಗಿ ಶುಭ ಹಾರೈಸಿದರು.ಕೃತಿಕಾರ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಹಿತ್ಯ ಮುಕುಟಗಳಿಗೆ ಗೌರವಾಭಿನಂದನೆ:
ಹೊರನಾಡ ಕನ್ನಡಿಗ ಗ್ರಾಮ ಸಾಹಿತ್ಯ ಸಂಭ್ರಮ ಮಹಾ ಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ,ಕನ್ನಡ ಮತ್ತು ತುಳು ಸಾಹಿತಿ ರಘು ಇಡ್ಕಿದು, ಯುವ ಸಾಹಿತಿಗಳಾಗಿರುವ ಸುಪ್ರೀತಾ ಚರಣ್ ಪಾಲಪ್ಪೆ ಕಡಬ,ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಮಹೇಶ್ ಆರ್ ನಾಯಕ್, ಬಾಲ ಸಾಹಿತಿಗಳಾಗಿ ಎರಡು ವರ್ಷದಲ್ಲಿ ಎರಡು ಕೃತಿಗಳನ್ನು ಕನ್ನಡ ಮಡಿಲಿಗೆ ಅರ್ಪಿಸಿದ ಧನ್ವಿತಾ ಕಾರಂತ್ ಅಳಿಕೆ ಮತ್ತು ಶಿರ್ಷಿತಾ ಕಾರಂತ್ ಅಳಿಕೆಯವರನ್ನು ಗೌರವಿಸಿದರು.
ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಕರ್ನಾಟಕ ಇದರ ಉಪಾಧ್ಯಕ್ಷೆ, ಯುವ ಸಾಹಿತಿ ವಿಂಧ್ಯಾ ಎಸ್ ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಿತು. ಕವಿಗೋಷ್ಠಿಯಲ್ಲಿ ಮಣಿ ಮುಂಡಾಜೆ, ಐಡಾ ಲೋಬೊ ಮಾಣಿ,ನ್ಯಾನ್ಸಿ ನೆಲ್ಯಾಡಿ, ಹರೀಶ್ ಮಂಜೊಟ್ಟಿ, ದೇವಿಕಾ ಜೆ. ಜಿ. ಬನ್ನೂರು, ಪಾವನಿ, ಕವಿತಾ ಸತೀಶ್, ಯಶೋದ ಬಲ್ನಾಡ್,ಅಮೃತಾ, ಎ. ಆರ್. ಭಂಡಾರಿ ವಿಟ್ಲ, ಮೋಕ್ಷಿತ್, ಮನೀಶ್ ಕಲ್ಲಡ್ಕ, ಮಲ್ಲಿಕಾ ಐ ಹಿರೇಬಂಡಾಡಿ, ಆತ್ಮಿಕಾ, ಲಿಖಿತ ವಿಜಿತ್ ಕೋಟ್ಯಾನ್, ಲೇಖನ,, ಗಿರೀಶ್ ಪೆರಿಯಡ್ಕ, ರಿಧಿಕಾ ಶೆಟ್ಟಿ, ಶಿಲ್ಪ. ಕೆ. ಎನ್, ಪ್ರಕೃತಿ, ಅಕ್ಷತಾ ನಾಗನಕಜೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ವೈಶಾಲಿ ಬೆಳ್ಳಿಪ್ಪಾಡಿ, ಮಾನಸ ವಿಜಯ ಕೈಂತಜೆ,ಅಶ್ವಿನಿ ಕುಲಾಲ್ ಕಡ್ತಲ, ಸುನೀತಾ ಶ್ರೀರಾಮ್ ಕೊಯಿಲ, ಉಷಾ ಮುರಳೀಧರ, ವೀಕ್ಷಾ ಮುಂತಾದ ಕವಿಗಳು ಜಿಲ್ಲೆಯ ವಿವಿಧ ಕಡೆಯಿಂದ ಭಾಗವಹಿಸಿದ್ದರು.
ಕವಿಗೋಷ್ಠಿಯನ್ನು ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು ಸಂಯೋಜಿಸಿ, ರೂಪೇಶ್ ವಿಟ್ಲ ಸ್ವಾಗತಿಸಿ, ಶಶಿಧರ್ ಏಮಾಜೆ ವಂದಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಣಿ ಮುಂಡಾಜೆ ಪ್ರಾರ್ಥಿಸಿ, ಆಶಾಮಯ್ಯ ಪುತ್ತೂರು ಸ್ವಾಗತಿಸಿ, ರಶ್ಮಿತಾ ಸುರೇಶ್ ಜೋಗಿಬೆಟ್ಟುರವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುನೀತಾ. ಎನ್. ಮತ್ತು ಗಿರೀಶ್ ಕೊಯಿಲ,ಮಂಜುಶ್ರೀ ನಲ್ಕ ನಿರೂಪಿಸಿದರು. ಸೌಮ್ಯರಾಮ್ ಕಲ್ಲಡ್ಕ ವಂದಿಸಿದರು.