ಬಡಗನ್ನೂರು : ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ವಾರ್ಷಿಕ ನೇಮೋತ್ಸವವು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.9 ಮತ್ತು 10 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಮಾ.9 ರಂದು ಬೆಳಿಗ್ಗೆ ಗಂಟೆ 7ಕ್ಕೆ ಪೆರ್ಲಂಪ್ಪಾಡಿ, ಕೊರ್ಮಡ್ಲ ಶಿವರಾಮ ಹೊಳ್ಳ ರವರ ನೇತೃತ್ವದಲ್ಲಿ ಗಣಪತಿಹೋಮ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆ;-
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯಪದವು ನವೋದಯ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಸುಕೇಶ್ ರೈ ಕುತ್ಯಾಳ ಉದ್ಘಾಟಿಸಿ ಶುಭ ಹಾರೈಸಿದರು. ಸಂಗೀತ ಮತ್ತು ಭಜನಾ ಶಿಕ್ಷಕರಾದ ದಾಮೋದರ ಯಂ. ಮರದಮೂಲೆ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಭಜನಾ ಕಾರ್ಯಕ್ರಮ :-
ಭಜನಾ ಕಾರ್ಯಕ್ರಮದಲ್ಲಿ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ, ಸುಳ್ಯಪದವು,ಶ್ರೀ ಹರೀ ನಾಮಾಮೃತ ಮಕ್ಕಳ ಭಜನಾ ತಂಡ ಮರದಮೂಲೆ, ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ, ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಸುಳ್ಯಪದವು, ಶ್ರೀ ಮಹಾವಿಷ್ಣು ಭಜನಾ ಸಂಘ ಸುಳ್ಯಪದವು ,ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಳ್ಯಪದವು ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಭಕ್ತಿಗಾನ;-
ದಾಮೋದರ ಯಂ. ಮರದಮೂಲೆ ಇವರ ಸಾರಥ್ಯದಲ್ಲಿ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಯಿತು ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಗುಳಿಗ ದೈವದ ನೇಮೋತ್ಸವ, 8ಕ್ಕೆ ಶ್ರೀ ದೈವದ ಭಂಡಾರ ತೆಗೆಯುವುದು. ರಾತ್ರಿ ಗಂ 11 ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಿತು.

ನಾಟಕ ಪ್ರದರ್ಶನ
ರಾತ್ರಿ ಗಂ 7 ರಿಂದ ಫ್ರೆಂಡ್ಸ್ ಕಲಾವಿದೆರ್ ಸುಳ್ಯಪದವು ಇದರ ಸದಸ್ಯರಿಂದ, ಶ್ರೀ ಶಶಿಧರ್ ಕೆ. ಬಂಡಿತ್ತಡ್ಕ ವಿರಚಿತ ತುಳು ಸಾಂಸಾರಿಕ ಮತ್ತು ಹಾಸ್ಯಮಯ ನಾಟಕ ದೇವತೆ ಪ್ರದರ್ಶನ ಗೊಂಡಿತು.
ಈ ಸಂದರ್ಭದಲ್ಲಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ,ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಮರದಮೂಲೆ ,ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು ,ಜೊತೆ ಕಾರ್ಯದರ್ಶಿ ವಿನಯ ಕುಮಾರ್ ದೇವಸ್ಯ ಕೋಶಾಧಿಕಾರಿ ಭಾಸ್ಕರ ಹೆಗ್ಡೆ ಶಬರಿನಗರ, ಪೂಜಾಕರ್ಮಿ ಮಾಧವ ಸಾಲಿಯಾನ್ ಮರದಮೂಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮತ್ತು ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.

ಅನ್ನಸಂತರ್ಪಣೆ
ರಾತ್ರಿ ಗಂ 8-30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಊರ ಪರವೂರ ಭಕ್ತಾಧಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.