ವಿದ್ಯಾವಂತ ಯುವ ಸಮೂಹಕ್ಕೂ ಸರಕಾರದಿಂದ ನೆರವು: ಉಮಾನಾಥ ಶೆಟ್ಟಿ
ಪುತ್ತೂರು: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಅನೇಕ ಮಂದಿ ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ ಇದಕ್ಕೆ ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಕರ್ನಾಟಕದಲ್ಲಿ ವಿದ್ಯಾವಂತ ಯುವಕರಿಗೆ ನೆರವು ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಯುವನಿಧಿ ಗ್ಯಾರಂಟಿಯನ್ನು ಜಾರಿಗೆ ತಂದಿದೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಹೇಳಿದರು.
ಅವರು ಸಂತ ಫಿಲೋಮಿನಾ ಕಾಲೇಜು ವಠಾರದಲ್ಲಿ ನಡೆದ ಯುವ ನಿಧಿ ನೋಂದಣಿ ಶಿಬಿರ,ಸಂವಾದ ಕಾರ್ಯಕ್ರಮದಲ್ಲಿ ಮಾ.10ರಂದು ಮಾತನಾಡಿದರು.
ವಿದ್ಯೆ ಕಲಿತ ಯುವ ಸಮೂಹಕ್ಕೆ ಉದ್ಯೋಗ ನೀಡಬೇಕಾದ್ದು ಸರಕಾರದ ಕರ್ತವ್ಯವಾಗಿದೆ . ಆದರೆ ಕೇಂದ್ರ ಸರಕಾರದ ಆರ್ಥಿಕ ನೀತಿ ಮತ್ತು ಖಾಸಗೀಕರಣದಿಂದ ಯುವಕರು ಉದ್ಯೋಗ ವಂಚಿತರಾಗುವಂತಾಗಿದೆ ಈ ವಿಚಾರವನ್ನು ಯುವಕರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವು ವಂ| ಡಾ.ಆಂಟನಿ ಪ್ರಕಾಶ್ ಮೊಂತೇರೋ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಬ್ಬು ನವಗ್ರಾಮ,ಜಿಲ್ಲಾ ಉದ್ಯೋಗ ವಿನಿಮಯ ಸಹ ವ್ಯವಸ್ಥಾಪಕ ಅರುಣ್ ಕುಮಾರ್,ಕೆ ಎಸ್ ಆರ್ ಟಿ ಸಿ ಪುತ್ತೂರು ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್, ಅಧಿಕಾರಿಗಳಾದ ದಯಾನಂದ್,ಅಬ್ಬಾಸ್,ಸುರೇಶ್,ಸೇರಿದಂತೆ ಪ್ರವೀಣ್ ಡಿ ಮತ್ತು ವಿದ್ಯಾರ್ಥಿಗಳು,ಫಲಾನುಭವಿಗಳು ಉಪಸ್ಥಿತರಿದ್ದರು.