ಗೌರವಾಧ್ಯಕ್ಷ: ಭಾಸ್ಕರ ಎಸ್.ಗೌಡ, ಅಧ್ಯಕ್ಷ: ರೋಯಿ ಟಿ.ಎಂ., ಕಾರ್ಯದರ್ಶಿ: ಮೋನಪ್ಪ ಗೌಡ, ಕೋಶಾಧಿಕಾರಿ: ವಿಶ್ವನಾಥ ಶೆಟ್ಟಿ, ಲೆಕ್ಕಪರಿಶೋಧಕ: ಉಣ್ಣಿಟ್ಟ ಎಂ.ಕೆ.
ನೆಲ್ಯಾಡಿ: ಹೊಸದಾಗಿ ರಚನೆಗೊಂಡಿರುವ ಸಾರಥಿ ಆಟೋ ಚಾಲಕ-ಮಾಲಕರ ಸಂಘ ಇಚ್ಲಂಪಾಡಿ ಇದರ ಗೌರವಾಧ್ಯಕ್ಷರಾಗಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ಅಧ್ಯಕ್ಷರಾಗಿ ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಕುರಿಯಾಕೋಸ್ ಯಾನೆ ರೋಯಿ ಟಿ.ಎಂ., ಕಾರ್ಯದರ್ಶಿಯಾಗಿ ಕೆ.ಮೋನಪ್ಪ ಗೌಡ, ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಲೆಕ್ಕಪರಿಶೋಧಕರಾಗಿ ಉಣ್ಣಿಟ್ಟ ಎಂ.ಕೆ. ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಮೇಶ್ ಗೌಡ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಬಿ., ಸದಸ್ಯರಾಗಿ ಕೇಶವ ಕೊರಮೇರು, ಹರಿಪ್ರಸಾದ್, ತಾರನಾಥ, ಶೀನಪ್ಪ ಗೌಡ, ರವಿಕುಮಾರ್, ವಿಶ್ವನಾಥ ಶೆಟ್ಟಿ, ಮೋಕ್ಷಿತ್ ಬಿಜೇರು, ಸಂತೋಷ್, ಇಸುಬು, ಕೇಶವ, ಉದಯಕುಮಾರ್, ಕುಕ್ಕಣ್ಣ ಗೌಡ, ವರ್ಗೀಸ್ರವರು ನೇಮಕಗೊಂಡಿದ್ದಾರೆ. ಸ್ಥಳೀಯ ಆಟೋ ಚಾಲಕರ ಹಿತಾಸಕ್ತಿಗಳನ್ನು ಸುಧಾರಿಸುವ ಜೊತೆಗೆ ಭವಿಷ್ಯದಲ್ಲಿ ಹಲವು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ನೂತನ ಅಧ್ಯಕ್ಷ ರೋಯಿ ಟಿ.ಎಂ.ತಿಳಿಸಿದ್ದಾರೆ.