ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಮಾತೆಯರ ತ್ಯಾಗ ಪ್ರಧಾನ: ವಿಮಲಾ ತೇಜಾಕ್ಷಿ
ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿಯ ನೇತೃತ್ವದಲ್ಲಿ 18 ನೇ ವರ್ಷದ ಪವಿತ್ರ ಗಂಗಾಪೂಜೆ ಹಾಗೂ ಮಾತೃ ಸಂಗಮ ಕಾರ್ಯಕ್ರಮವು ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿ ಮಾ.9ರಂದು ನಡೆಯಿತು.
ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಪ್ಪಿನಂಗಡಿ ಶ್ರೀ ರಾಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ವಿಮಲಾ ತೇಜಾಕ್ಷಿ , ಸಮಾಜದಲ್ಲಿ ವ್ಯಕ್ತಿ ನಿರ್ಮಾಣ ಕಾರ್ಯದಲ್ಲಾಗಲಿ, ವ್ಯಕ್ತಿಯ ಸಾಧನೆಯ ಮಾರ್ಗದಲ್ಲಾಗಲಿ ಮಾತೃ ಶಕ್ತಿಯ ತ್ಯಾಗ ಪರಿಶ್ರಮಗಳೇ ಪ್ರಧಾನ ಪಾತ್ರವಹಿಸುತ್ತಿದೆ. ಮಾತೆಯರನ್ನು ಗೌರವಿಸುವ ಮೂಲಕ ಅವರು ಮನೆಯ ಮಕ್ಕಳಿಗಾಗಿ ಕುಟುಂಬದ ಶ್ರೇಯಸ್ಸಿಗಾಗಿ ಎಲೆಮರೆಯ ಕಾಯಿಯಂತೆ ಮಾಡುತ್ತಿರುವ ತ್ಯಾಗಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ರೈತಬಂಧು ಸಂಸ್ಥೆಯ ಮಾಲಕಿ ಉಮಾ ಎಸ್. ನಾಯಕ್ ರವರು ಮಾತನಾಡಿ, ವ್ಯಕ್ತಿಯನ್ನು ಸಮಾಜಕ್ಕೆ ಶಕ್ತಿಯನ್ನಾಗಿಸುವ ಕಾರ್ಯ ಸಂಸ್ಕಾರ ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಶಿಕ್ಷಣವನ್ನು ನೀಡುತ್ತಾ, ಪ್ರಕೃತಿಯ ಆರಾಧನೆಯಲ್ಲಿ ಪರಮಾತ್ಮನನ್ನು ಕಾಣುವ ಗಂಗಾ ಪೂಜನದಂತಹ ಕಾರ್ಯಗಳು ನವ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದರು.
ಆಕರ್ಷಕವಾಗಿ ನಡೆದ ಗಂಗಾರತಿಯಲ್ಲಿ ನವೀನ್ ಕುಮಾರ್, ಯತೀಶ್ ಕರಾಯ, ಪ್ರದೀಪ್ ಆಚಾರ್ಯ, ವಿಕೇಶ್, ಅಶ್ವಥ್ ಪೂಜಾರಿ, ಗಿರೀಶ್ ಆಚಾರ್ಯ, ಸೂರಜ್ ಹೆಗ್ಡೆ ಸಹಕರಿಸಿದರು. ದೂಪದಾರತಿಯಲ್ಲಿ ಅಕ್ಷತಾ, ಪುಷ್ಪ, ಭಾಗ್ಯಶ್ರೀ, ಜ್ಯೋತಿ, ಚಿತ್ರ, ರತ್ನಾವತಿ, ಚೇತನಾ ಸಹಕರಿಸಿದರು. ಶಂಖಾನಾದದಲ್ಲಿ ಪುಟಾಣಿಗಳಾದ ಅತೀಕ್ಷ್, ಚಿರಾಗ್, ಗೌರಸ್ಶ್, ಶುವಿತ್, ಜಶ್ವಿಕ್, ವಿಹಾನ್, ಪ್ರೀತೇಶ್ ಭಾಗಿಗಳಾಗಿ ಗಮನ ಸೆಳೆದರು.

ವೇದಿಕೆಯಲ್ಲಿ ಮಾತೃ ಮಂಡಳಿಯ ಪ್ರಧಾನ ಸಂಚಾಲಕಿ ಶ್ಯಾಮಲಾ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಶಿವಶಂಕರ್ ನಾಯಕ್, ಬೇಬಿ ಎಸ್. ಶೆಟ್ಟಿ, ಹರೀಶ್ ಕಿಣಿ, ಸತೀಶ್ ಕಿಣಿ , ವೆಂಕಟರಮಣ ರಾವ್, ತಿಮ್ಮಪ್ಪ ಗೌಡ , ಸುಜೀರ್ ಗಣಪತಿ ನಾಯಕ್, ಸುಂದರ ಗೌಡ, ನಂದೀಶ್ ವೈ.ಡಿ., ರಾಮಚಂದ್ರ ಮಣಿಯಾಣಿ, ಸುನೀಲ್ ಅನಾವು, ಸುರೇಶ್ ಅತ್ರೆಮಜಲು, ಸುನಿಲ್ ದಡ್ಡು, ರಾಧಾಕೃಷ್ಣ ಬೊಳ್ಳಾವು, ಹರೀಶ್ ನಟ್ಟಿಬೈಲ್, ರಾಘವೇಂದ್ರ ನಾಯಕ್ ನಟ್ಟಿಬೈಲ್, ಎನ್. ಗೋಪಾಲ ಹೆಗ್ಡೆ, ಚಿದಾನಂದ ನಾಯಕ್, ಲತಾ, ಕಾಮಾಕ್ಷಿ ಜಿ. ಹಗ್ಡೆ , ಶೋಭಾ ದಯಾನಂದ್, ಲೋಲಾಕ್ಷಿ, ಶಾರದಾ ಜಯಂತ, ಮೋಹಿನಿ, ಸೀತಾ ಸತೀಶ್, ಎನ್. ಉಮೇಶ್ ಶೆಣೈ, ಗುಣಕರ ಅಗ್ನಾಡಿ, ಜಯಶ್ರೀ ಜನಾರ್ದನ್, ಜ್ಯೋತಿ ಹೇರಂಭ ಶಾಸ್ತ್ರಿ, ಸುಗಂದಿ, ಸುಮನ್ ಲದ್ವಾ, ವಿದ್ಯಾಧರ ಜೈನ್, ಕಂಗ್ವೆ ವಿಶ್ವನಾಥ ಶೆಟ್ಟಿ, ಯು. ರಾಜೇಶ್ ಪೈ, ಕರಾಯ ರಾಘವೇಂದ್ರ ನಾಯಕ್, ಚಂದ್ರಶೇಖರ್ ತಾಳ್ತಜೆ, ಕೈಲಾರ್ ರಾಜಗೋಪಾಲ ಭಟ್, ಪದ್ಮಯ್ಯ ಗೌಡ, ಗಾಯತ್ರಿ ವಸಂತ್, ರಮೇಶ್ ನಟ್ಟಿಬೈಲ್, ಗೀತಾಲಕ್ಷ್ಮಿ ತಾಳ್ತಜೆ, ಮನೋಜ್ ಶೆಟ್ಟಿ, ಹರಿರಾಮಚಂದ್ರ, ನಿತೇಶ್ ಗಾಣಿಗ, ಶರತ್ ಕೋಟೆ, ಕೆ ಜಗದೀಶ್ ಶೆಟ್ಟಿ, ಯು. ರಾಧಾ, ಶಶಿಕಲಾ ಭಾಸ್ಕರ್, ಶಾಂತಾ ವಿ. ಶೆಟ್ಟಿ, ವಸಂತಿ ಭಾಸ್ಕರ್ , ಜಯಂತ್ ಪೋರೋಳಿ, ಚೈತ್ರ, ಕಾಂತಿಮಣೀ, ಚಂದ್ರಾವತಿ, ರವಿ ಇಳಂತಿಲ , ಮಾಧವ ಆಚಾರ್ಯ, ಅನೂಪ್ ಸಿಂಗ್, ಮಹೇಶ್ ಕಿಣಿ, ಸುನಿಲ್ ಸಂಗಮ್ ಮೊದಲಾದವರು ಭಾಗವಹಿಸಿದ್ದರು.
ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತಕೃಷ್ಣ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್ ವಂದಿಸಿದರು. ಹರಿಣಾಕ್ಷಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.