ಪುತ್ತೂರು: ಎಂ/ಎಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನ ಅಡಿಯಲ್ಲಿ ಶಿವಧ್ವಜ್ ಶೆಟ್ಟಿ ನಿರ್ಮಿಸಿ, ನಿರ್ದೇಶನ ಮಾಡಿದ ” ಈ ಮಣ್ಣು “ಚಿತ್ರಕ್ಕೆ 2020ನೇ ಸಾಲಿನ ರಾಜ್ಯ ಪ್ರಶಸ್ತಿಯಲ್ಲಿ ಎರಡು ಪ್ರಶಸ್ತಿ ಪಡೆದಿದೆ.
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ 2020 ಮತ್ತು ಚಿತ್ರದ ಸಾಹಿತ್ಯಕ್ಕಾಗಿ ಸಚಿನ್ ಶೆಟ್ಟಿ ಕುಂಬ್ಳೆಯವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಬಂದಿದೆ. ದುಷ್ಯಂತ್ ರೈ, ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ರಾಜ್ ಗೋಪಾಲ್ ಜೋಷಿ, ಚಂದ್ರಹಾಸ್ ಉಳ್ಳಾಲ್, ಹರೀಶ್ ಜೋಡುರಸ್ತೆ, ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಾಹಣ,ಎಸ್. ಪಿ. ಚಂದ್ರಕಾಂತ್ ಶೆಟ್ಟಿ ಸಂಗೀತ, ಶ್ರೀನಿಧಿ ಡಿ. ಎಸ್ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ಪ್ರತೀ ವಿಭಾಗದಲ್ಲಿ ದುಡಿದ ಎಲ್ಲಾ ತಂತ್ರಜ್ಞರನ್ನು ಈ ಸಮಯದಲ್ಲಿ ಮತ್ತೊಮ್ಮೆ ನೆನೆಯುತ್ತ, ಎಲ್ಲರ ಶ್ರಮಕ್ಕೆ ಸಂದ ಪ್ರತಿಫಲ ಇದಾಗಿದ್ದು, ಸಂಪೂರ್ಣ ತಂಡಕ್ಕೆ ಈ ಪ್ರಶಸ್ತಿನ ಅರ್ಪಣೆ ಮಾಡುತ್ತಿದ್ದೇನೆ ಎಂದು ಚಿತ್ರದ ನಿರ್ಮಾಪಕ – ನಿರ್ದೇಶಕ ಶಿವಧ್ವಜ್ ಶೆಟ್ಟಿ ತಿಳಿಸಿದ್ದಾರೆ.