ಪುತ್ತೂರು:ಪಾಣಾಜೆ, ಸುಳ್ಯಪದವು ಮೊದಲಾದ ಪ್ರದೇಶಗಳ ಗಡಿ ಭಾಗದಲ್ಲಿರುವ ವಾಹನ ಚಾಲಕ, ಮ್ಹಾಲಕರಿಗೆ ಇನ್ನು ಮುಂದೆ ತಮ್ಮ ವಾಹನಗಳಿಗೆ ಪೆಟ್ರೋಲಿಯಂನ ಕೊರತೆ ಉಂಟಾಗಲು ಸಾಧ್ಯವಿಲ್ಲ. ಮಾ.16ರಂದು ಪುತ್ತೂರು-ಪಾಣಾಜೆ ರಸ್ತೆಯ ಇರ್ದೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನವರ ವಿತರಕ ಸಂಸ್ಥೆ, ನವ ಮುಂಬಯಿಯ ಪೀಜೆ ಗ್ರೂಪ್ ಆಫ್ ಕಂಪನಿಯವರ ಪೀಜೆ ಪೆಟ್ರೋಲಿಯಂ ಶುಭಾರಂಭಗೊಳ್ಳಲಿದ್ದು ಗಡಿ ಭಾಗದಲ್ಲಿ ಓಡಾಡುವ ವಾಹನಗಳಿಗೆ ಡೀಸೆಲ್ ಹಾಗೂ ಪೆಟ್ರೋಲ್‌ಗಳಿಗೆ ಅನುಕೂಲವಾಗಲಿದೆ.
ನವ ಮುಂಬಯಿಯಲ್ಲಿ ಪ್ರಾರಂಭಗೊಂಡಿರುವ ‘ಪೀಜೆ ಗ್ರೂಪ್ ಆಫ್ ಕಂಪನಿಗೆ ಸುಮಾರು 14 ವರ್ಷಗಳ ಇತಿಹಾಸವಿದೆ. ದೂರದ ಮುಂಬೈಯಲ್ಲಿ ಪ್ರಾರಂಭಗೊಂಡಿರುವ ಕಂಪನಿಯು ವಿವಿಧ ಕ್ಷೇತ್ರಗಳಲ್ಲಿ ವಿವಿಧ ರಾಜ್ಯಗಳಲ್ಲಿ ತನ್ನ ವ್ಯವಹಾರೋದ್ಯಮವನ್ನು ವಿಸ್ತರಿಸುತ್ತಾ ಬಂದಿದೆ. ಇದೀಗ ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಗಡಿ ಭಾಗದ ಗ್ರಾಮೀಣ ಪ್ರದೇಶಗಳ ವಾಹನಗಳ ಚಾಲಕ, ಮ್ಹಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇರ್ದೆಯಲ್ಲಿ ಇಂಡಿಯಲ್ ಆಯಿಲ್ ಕಾರ್ಪೋರೇಷನ್‌ನವರ ವಿತರಕ ಸಂಸ್ಥೆಯನ್ನು ಪ್ರಾರಂಭಿಸಿದೆ.
ನೂತನ ಪೆಟ್ರೋಲ್ ಪಂಪ್ ಕೇರಳದ ಗಡಿ ಭಾಗದಲ್ಲಿರುವ ಗ್ರಾಮೀಣ ಪ್ರದೇಶಗಳಾಗಿರುವ ಇರ್ದೆ, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ, ಬಡಗನ್ನೂರು, ಸುಳ್ಯಪದವು ಸೇರಿದಂತೆ ಸುತ್ತ ಮುತ್ತಲ ಹಲವು ಗ್ರಾಮಗಳಲ್ಲಿ ಸಂಚರಿಸುವ ವಾಹನಗಳ ಮ್ಹಾಲಕರಿಗೆ ಅನುಕೂಲವಾಗಲಿದೆ.
ಮುಂದೆ ಗ್ಯಾಸ್ ಪಂಪ್:
ಗಡಿ ಭಾಗದ ಆಟೋ ರಿಕ್ಷಾ ಚಾಲಕ, ಮ್ಹಾಲಕರು ಹಾಗೂ ಸಾರ್ವಜನಿಕರ ಬಹು ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಗ್ಯಾಸ್ ಪಂಪ್ ಪ್ರಾರಂಭಿಸುವ ಯೋಜನೆಯಿದೆ ಎಂದು ಪೀಜೆ ಗ್ರೂಪ್ ಆಫ್ ಕಂಪನಿಯ ಕೃಷ್ಣರವರು ತಿಳಿಸಿದ್ದಾರೆ.
ಪಡ್ರೆ ಶ್ರೀ ಜಟಾಧಾರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಭಟ್ ತಡೆಗಲ್ಲು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈಯವರು ಪಂಪ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಕಚೇರಿ ಉದ್ಘಾಟಿಸಲಿದ್ದಾರೆ. ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಅಧ್ಯಕ್ಷ ರಂಗನಾಥ ರೈ ಗುತ್ತು, ನಿಡ್ಪಳ್ಳಿ ಚರ್ಚ್‌ನ ಧರ್ಮಗುರು ರೆ|ಫಾ|ಜೇಸನ್ ಲೋಬೋ, ಕೊರಿಂಗಿಲ ತಂಙಳ್ ಹಾಜಿ.ಸಯ್ಯದ್ ಬಹಲವಿ ಹಸೀಮ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್‌ಬೀಡು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪೀಜೆ ಗ್ರೂಪ್ ಆಫ್ ಕಂಪನಿಯ ಪ್ರಕಟಣೆ ತಿಳಿಸಿದೆ.