ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಪ್ರತಿಷ್ಠಾ ಉತ್ಸವ ಹಾಗೂ ಜಾತ್ರೋತ್ಸವ ಮಾ.13 ರಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಿಗ್ಗೆ ಪ್ರಾರ್ಥನೆ ನಂತರ ಗಣಪತಿ ಹೋಮ, ದೇವರಿಗೆ ಪಂಚವಿಂಶತಿ ಕಲಶ ನಡೆಯಿತು.ನಂತರ ಶ್ರೀ ಶಾಂತದುರ್ಗಾ ಮಹಿಳಾ ಭಜನಾ ತಂಡ ನಿಡ್ಪಳ್ಳಿ ಹಾಗೂ ಶ್ರೀ ಶಾಂತದುರ್ಗಾ ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಪೂಜೆ ನಡೆದು ಪ್ರಸಾದ ವಿತರಣೆ ನಂತರ ಶ್ರೀ ಭೂತಬಲಿ ಉತ್ಸವ,ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ನಡೆದು ಶ್ರೀ ದೇವರ ಗರ್ಭ ಗೃಹ ಪ್ರವೇಶ ಮಂತ್ರಾಕ್ಷತೆ ನಂತರ ಮಹಾ ಅನ್ನಸಂತರ್ಪಣೆ ನಡೆಯುವ ಮೂಲಕ ಸಂಪನ್ನಗೊಂಡಿತು.
ಆಡಳಿತ ಮಂಡಳಿ ಗೌರವಾಧ್ಯಕ್ಷ ನಿಡ್ಪಳ್ಳಿ ಗುತ್ತು ಪ್ರಮೋದ್ ಆರಿಗ ಮಜಲೋಡಿ ಗುತ್ತು, ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಪಟ್ಟಾದೀಶ ಪ್ರವೀಣ್ ಎನ್.ಅರಿಗ ನಿಡ್ಪಳ್ಳಿ ಗುತ್ತು ಮತ್ತು ಮನೆಯವರು ,ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾಗೇಶ ಗೌಡ ಹಾಗೂ ಸರ್ವಸದಸ್ಯರು ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.