ಲಯನ್ಸ್ ಪುತ್ತೂರು ಕ್ರೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ ಪಿಎಂಜೆಎಫ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ.10 ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿನ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿತು.

ಲಯನ್ಸ್ ಪುತ್ತೂರು ಕ್ರೌನ್ ನ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಲಯನ್ಸ್ ಪುತ್ತೂರು ಕ್ರೌನ್ ಹೊಸ ಕ್ಲಬ್ ಆಗಿದ್ದರೂ ಕೂಡ ಕ್ಲಬ್ ಅನೇಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರ ಶ್ಲಾಘನೆಗೆ ಪಾತ್ರವಾಗಿದೆ ಎಂದರು. 

ಲಯನ್ಸ್ ಪುತ್ತೂರು ಕ್ರೌನ್ ಅನ್ನು ಪದ ಪ್ರದಾನಗೊಳಿಸಿದ್ದ ಮಾಜಿ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜ ಪಿಎಂಜೆಎಫ್ ಮಾತನಾಡಿ, ಸುಮಾರು 31 ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಲಯನ್ಸ್ ಪುತ್ತೂರು ಕ್ರೌನ್ ತನ್ನ ಹೆಸರಿಗೆ ತಕ್ಕಂತೆ ಸಾಧನೆಯನ್ನು ತೋರ್ಪಡಿಸಿದೆ‌. ಹಸುಗೂಸಿನಂತಿರುವ ಈ ಕ್ಲಬ್ ಇತರ ಕ್ಲಬ್ ಗಳಂತೆ ಸರಿಸಮನಾಗಿ ಸೇವಾ ಚಟುವಟಿಕೆಗಳನ್ನು ಮಾಡುತಿದೆ ಎಂದರು.

ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ರೀಜ್ಹನ್ ಅಂಬಾಸಿಡರ್ ಲ್ಯಾನ್ಸಿ ಮಸ್ಕರೇನ್ಹಸ್, ವಲಯ ಎರಡರ ಚೇರ್ ಪರ್ಸನ್ ಸುದೇಶ್ ಭಂಡಾರಿರವರು ಶುಭ ಹಾರೈಸಿದರು. ಕ್ಲಬ್ ಸದಸ್ಯರಾದ ವೆಂಕಟೇಶ್ ಹೆಬ್ಬಾರ್  ಗೋವರ್ಧನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಕ್ಲಬ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ಕ್ಲಬ್ ನ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಲೀನಾ ಮಚಾದೋ ವರದಿ ಮಂಡಿಸಿದರು. ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ ವಂದಿಸಿದರು. ಕ್ಲಬ್ ಸದಸ್ಯರಾದ ಅಂತೋನಿ ಒಲಿವೆರಾ ಹಾಗೂ ನಿಶಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ ಅಧಿಕೃತ ಭೇಟಿ ಸಂದರ್ಭ ಲಯನ್ಸ್ ಪುತ್ತೂರು ಕ್ರೌನ್ ವತಿಯಿಂದ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ.ರವರಿಗೆ ಶಾಲು ಹೊದಿಸುವ ಮೂಲಕ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here