ಜಾರತ್ತಾರು ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಹಸಿರುವಾಣಿ ಹೊರಕಾಣಿಕೆ ಸಮರ್ಪಣೆ

0

ಬಡಗನ್ನೂರು : ಜಾರತ್ತಾರು ಪನೆಕ್ಕಳ  ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಾರಿಪೂಜಾ ಕಾರ್ಯಕ್ರಮವು  ಮಾ.15 ರಿಂದ 17 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯುತ್ತಿದ್ದು, ಆ ಪ್ರಯುಕ್ತ ಮಾ.15 ರಂದು ಹಸಿರುವಾಣಿ  ಹೊರಕಾಣಿಕೆ ಮೆರವಣಿಗೆ ಚಾಲನೆ ನೀಡಲಾಯಿತು.

ಹಸಿರವಾಣಿ ಹೊರಕಾಣಿಕೆ ಸಮರ್ಪಣೆ;-
ಪಾಪೆಮಜಲು ಬೇಂಗತ್ತಡ್ಕ ಬ್ರಹ್ಮ ಬೈದರ್ಕಕಳ ಗರಡಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಮಡ್ಡಂಗಳ ಕಲ್ಲೇರಿ ಶ್ರೀ ವೆಂಕಟರಮಣನ ಮಠದ ಬಳಿ  ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಹೊರಕಾಣಿಕೆ ಮೆರವಣಿಗೆಯು ಮಂಡ್ಯಂಗಳ ಕಲ್ಲೇರಿ ಶ್ರೀ ವೆಂಕಟರಮಣನ ಮಠದಿಂದ ಜಾರಾತ್ತಾರಿಗೆ ಹಾದು ಬಂತು.

ಉಗ್ರಾಣ ಮುಹೂರ್ತ
ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಲಕ್ಷ್ಮಿನಾರಾಯಣ ಶೆಟ್ಟಿ ಅರಿಯಡ್ಕ ಉಗ್ರಾಣ ಮುಹೂರ್ತವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಮನಃಪೂರ್ವಕವಾಗಿ ನಡೆದ ಅಭೂತಪೂರ್ವ ಸುಂದರ ಕಾರ್ಯಕ್ರಮ ಇದಾಗಿದೆ ಪನೆಕ್ಕಳ ಈ ಪ್ರದೇಶದ ಊರಿನ ಎಲ್ಲರ ಸಹಕಾರದಿಂದ ಯುವಕರ ಉತ್ಸುಕತೆಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯಲು ಸಾಧ್ಯವಾಗಿದೆ. ಊರ ಪರವೂರ ಜನರಿಗೆ ಪರಿಚಯಿಸುವಂತ ಪ್ರದೇಶವಾಗಿದೆ. ಮುಂದೆ ಕೂಡಾ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವಂತೆ ಹೇಳಿ ಅಭಿವೃದ್ಧಿಗಾಗಿ ಶ್ರಮಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ;-
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರನ್ನು ಮಹಿಳಾ ಸದಸ್ಯರು ಸಿಂಗಾರಿ ಮೇಳ ಮೂಲಕ ಪೂರ್ಣಕುಂಭ ಸ್ವಾಗತ ಮಾಡಿದರು.

ರಾತ್ರಿ ಗಂ 7 ರಿಂದ ಪುಣ್ಯವಾಚನ, ಸ್ಥಳಶುದ್ದಿ, ಪ್ರಸಾದ ಶುದ್ದಿ,ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ, ಸುದರ್ಶನ ಹೋಮ ನಡೆದು ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರ ಶ್ರೀರಾಮ್ ಪಕ್ಕಳ ಅರಿಯಡ್ಕ, ತಿಮ್ಮಪ್ಪ ರೈ ಪಾಪೆಮಜಲು, ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ , ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು ,  ಪ್ರಧಾನ ಅರ್ಚಕ ನಾರಾಯಣ ಜಾರತ್ತಾರು, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಕಿಶೋರ್ ಶೆಟ್ಟಿ,   ಸುರೇಶ್ ನಾಯ್ಕ ಸಂದೀಪ್ ಅರಿಯಡ್ಕ  ಸದಾಶಿವ ಮಣಿಯಾಣಿ, ಪೂವಪ್ಪ ರೈ ಪನಕ್ಕಳ, ಅಂಗಪ್ಪ ಗೌಡ ಎರ್ಕ, ರಾಘವ ಪೂಜಾರಿ ಮಡ್ಯಂಗಳ, ಗುರುವಪ್ಪ ಹಾರತ್ತಾರು, ವಿಶ್ವನಾಥ ರೈ ಮಧು ನಿಲಯ, ಕೂಂತರ ಹಾರತ್ತಾರು, ನಾರಾಯಣ ಗೌಡ ಪಟಕಾನ, ದಿನೇಶ್ ಕುಮಾರ್ ಮಡ್ಯಂಗಳ, ಅಶೋಕ್ ಬೊಳ್ಳಾಡಿ, ಸುಂದರ ಎಸ್. ಶೇಖಮಲೆ, ಶಿವಪ್ಪ ಎಸ್‌. ಶೇಖಮಲೆ, ಹರಿಪ್ರಸಾದ್ ಶೇಖಮಲೆ, ಉಮೇಶ್ ಗೌಡ ಸುರುಳಮೂಳೆ, ವಿಶ್ವನಾಥ ರೈ ಎರಮೆ, ಗಣೇಶ್ ರೈ ಪಾಲ್ಗುಣಿ, ಪ್ರಮೋದ್ ರೈ ಪಣಿಕ್ಕಳ, ಸತೀಶ್ ಕರ್ಕೇರ ಮಡ್ಯಂಗಳ, ಗಣೇಶ್ ಶೇಖಮಲೆ, ಉಮೇಶ್ ಯು.ಎಸ್. ಶೇಖಮಲೆ, ಗಣೇಶ್ ರೈ ಹಾರತ್ತಾರು, ಸಚಿನ್ ಮಡ್ಯಂಗಳ ಸದಾಶಿವ ರೈ ಎರಮೆ, ಲೋಕೇಶ್ ರೈ ಪಯಂದೂರು.ಹಾಗೂ ಊರಿನವರು ಭಾಗವಹಿಸಿದ್ದರು. ಉಪಾಧ್ಯಕ್ಷ  ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here