ಆಲಂಕಾರು: ಜೇಸಿಐ ಆಲಂಕಾರು ಘಟಕದಲ್ಲಿ ವಿಶ್ವ ಮಹಿಳಾ ದಿನಾಚರಣೆ ,ಮಹಿಳಾ ಸಾಧಕಿಗೆ ಸನ್ಮಾನ ಹಾಗೂ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಆಲಂಕಾರು ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪೆರಾಬೆ ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹನ ಚಾಲಕಿ ಯಶೋಧ ಇವರಿಗೆ ಮಹಿಳಾ ಸಾಧಕಿ ಸನ್ಮಾನ ಹಾಗೂ ಆಲಂಕಾರು ಸಿ ಎ ಬ್ಯಾಂಕಿನ ಸಿಬ್ಬಂದಿ ಕೃಷ್ಣಪ್ಪ ಇವರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೇಸಿಐ ಆಲಂಕಾರಿನ ಅಧ್ಯಕ್ಷ ಜೇಸಿ ಗುರುರಾಜ್ ರೈ ಮಾತನಾಡಿ ಪ್ರಶಸ್ತಿ,ಪುರಸ್ಕಾರಗಳು ಸಮಾಜದ ಅರ್ಹ ವ್ಯಕ್ತಿಗಳಿಗೆ ತಲುಪಿದಾಗ ಅದರ ತೂಕ ಹೆಚ್ಚಾಗುತ್ತದೆ,ಆ ಕೆಲಸವನ್ನು ಜೇಸಿಐ ಆಲಂಕಾರು ಘಟಕ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಭಾರತದ ವಲಯ 15ರ ವಲಯ ತರಬೇತುದಾರೆ ಜೇಸಿ ಹೇಮಲತಾ ಪ್ರದೀಪ್ ಮಾತನಾಡಿ, ಮಹಿಳೆಯರು ಈ ರಾಷ್ಟ್ರದ ಸಂಪತ್ತು,ಇಂದು ಮಹಿಳೆಯರು ಪುರುಷ ಸರಿ ಸಮಾನವಾಗಿ ಎಲ್ಲ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವುದು ತುಂಬಾ ಸಂತೋಷದ ವಿಚಾರ,ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತ ಎಂಬ ಮನೋಭಾವನೆಯಿಂದ ಹೊರಬಂದು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿದ ಯಶೋಧ ಹಾಗೂ ಕೃಷ್ಣಪ್ಪ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಾ ಕೃತಜ್ಞತೆಗಳನ್ನು ಸಲ್ಲಿಸಿದರು.ನಿಕಟಪೂರ್ವಾಧ್ಯಕ್ಷೆ ಜೇಸಿ ಮಮತಾ ಅಂಬರಾಜೆ ಸನ್ಮಾನಿತರನ್ನು ಪರಿಚಯಿಸಿದರು,ಜೆಜೇಸಿ ಅಧ್ಯಕ್ಷೆ ಕೃತಿ ಕೆ.ಎಸ್ ಸನ್ಮಾನ ಪತ್ರ ವಾಚಿಸಿದರು.ಜೇಸಿ ಶೃತಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು,ಜೇಸಿ ಬಾಲಕೃಷ್ಣ ಕೇಪುಳು ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು,ಮಹಿಳಾ ಜೇಸಿ ಅಧ್ಯಕ್ಷೆ ಜೇಸಿ ಸುನೀತಾ ಜಿ ರೈ ಕಾರ್ಯಕ್ರಮ ನಿರ್ವಹಿಸಿದರು.