ಎಡನೀರು ಶ್ರೀಗಳಿಂದ ಮೆರವಣಿಗೆಗೆ ಚಾಲನೆ
ಶಂಖನಾದ, ಚೆಂಡೆಯ ಸದ್ದು, ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ

ಪುತ್ತೂರು: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ನಂದಿ ರಥಯಾತ್ರೆ ಸಂಚಲನ ಸಮಿತಿ ಪುತ್ತೂರು ಇದರ ವತಿಯಿಂದ ಮಾ.16ರಂದು ಪುತ್ತೂರಿಗೆ ಆಗಮಿಸಿದ ನಂದಿ ರಥ ಯಾತ್ರೆಗೆ ದರ್ಬೆಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ದರ್ಬೆಯಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚೀದಾನಂದ ಭಾರತೀ ಶ್ರೀಪಾಂಗಳವರು ದೇಶಿ ನಂದಿಗೆ ಹಾರಾರ್ಪಣೆ ಮಾಡಿ ಶ್ರೀ ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚಣೆ ಮಾಡಿದರು. ಡಾ. ಸಚಿನ್ ಶಂಕರ್ ಹಾರಕೆರೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ನಂದಿ ರಥಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಶಂಖನಾದ, ಚೆಂಡೆಯ ಸದ್ದು, ಕುಣಿತ ಭಜನೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.