ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಎಂ. ಎ. ಪರೀಕ್ಷೆಯಲ್ಲಿ ಹರ್ಷಿತಾ ಕೆ. ಇವರಿಗೆ ಪ್ರಥಮ ರ್‍ಯಾಂಕ್ ಲಭಿಸಿದೆ.
ಪ್ರಸ್ತುತ ಪುತ್ತೂರಿನ ತಾರಿಗುಡ್ಡೆಯಲ್ಲಿ ನೆಲೆಸಿರುವ ಬೆಳ್ಳಾರೆ ತಡಗಜೆ ಪ್ರಜ್ವಲ್ ನಾಯಕ್ ಟಿ. ರವರ ಪತ್ನಿಯಾಗಿರುವ ಹರ್ಷಿತಾ ರವರು ಪೆರ್ಲಂಪಾಡಿ ಕಜೆ ಜಯಾನಂದ ಕೆ. ಮತ್ತು ಶಕುಂತಲಾ ದಂಪತಿಗಳ ಪುತ್ರಿ. ಇವರು ಎಂಎಸ್ಸಿ ಗಣಿತಶಾಸ್ತ್ರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಿ.ಎಡ್ ಪದವಿಯನ್ನು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಪೂರೈಸಿರುತ್ತಾರೆ.
ಡಾ. ಶಿವಪ್ರಕಾಶ್ ಮತ್ತು ಡಾ. ಕುಮಾರಸ್ವಾಮಿ ಇವರ ಮಾರ್ಗದರ್ಶನದಲ್ಲಿ ”ICT use and Implementation in Government College of Teacher Education Mangaluru” ಈ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿರುತ್ತಾರೆ. ಪ್ರಸ್ತುತ ಪುತ್ತೂರು ನೆಹರು ನಗರ ಸುದಾನ ವಸತಿ ಶಾಲೆ ಪ್ರೌಢಶಾಲಾ ವಿಭಾಗ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.