ಪುತ್ತೂರು: ಶಂಸುಲ್ ಉಲಮಾ ಯಂಗ್ಮೆನ್ಸ್ ಸಾರೆಪುಣಿ ಇದರ ವತಿಯಿಂದ ಅರ್ಹ 14 ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮ ಸಾರೆಪುಣಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಿತು.
ಸ್ಥಳೀಯ ಖತೀಬ್ ಮನ್ಸೂರ್ ರಯೀಸಿ ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು. ಶಂಸುಲ್ ಉಲಮಾ ಯಂಗ್ಮೆನ್ಸ್ ಹಾಗೂ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಸಾರೆಪುಣಿ ಮಾತನಾಡಿದರು.ಸಹ ಅದ್ಯಾಪಕರಾದ ಹಮೀದ್ ಮುಸ್ಲಿಯಾರ್ ಗಟ್ಟಮನೆ, ಯಂಗ್ಮೆನ್ಸ್ ಉಪಾಧ್ಯಕ್ಷ ಉಸ್ಮಾನ್ ಸಾರೆಪುಣಿ, ದಾರುಲ್ ಉಲೂಮ್ ಮದ್ರಸದ ಮಾಜಿ ಅಧ್ಯಕ್ಷ ಅರಬಿಕುಂಞಿ ಸಾರೆಪುಣಿ, ಎಸ್.ಎನ್ ಅಬ್ದುಲ್ಲ ಸಾರೆಪುಣಿ, ಮಸೀದಿಯ ಪ್ರ.ಕಾರ್ಯದರ್ಶಿ ಎಚ್.ಎ ಇಕ್ಬಾಲ್, ಕೋಶಾಧಿಕಾರಿ ಇಬ್ರಾಹಿಂ ಕುಯ್ಯಾರ್, ಸದಸ್ಯರಾದ ರಝಾಕ್ ಸಾರೆಪುಣಿ, ಲತೀಫ್ ಸಾರೆಪುಣಿ, ಅಬ್ದುರ್ರಹ್ಮಾನ್ ಸಾರೆಪುಣಿ, ಯಂಗ್ಮೆನ್ಸ್ ಸದಸ್ಯ ರಫೀಕ್ ಸಾರೆಪುಣಿ, ಕೋಶಾಧಿಕಾರಿ ಎಸ್ ಇಬ್ರಾಹಿಂ ಸಾರೆಪುಣಿ, ತಾಜುದ್ದೀನ್ ಸಾರೆಪುಣಿ, ಆಸಿಫ್ ಸಾರೆಪುಣಿ, ಉನೈಸ್ ಸಾರೆಪುಣಿ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಂಸುಲ್ ಉಲಮಾ ಯಂಗ್ಮೆನ್ಸ್ ಕಾರ್ಯದರ್ಶಿ ಹನೀಫ್ ಗಟ್ಟಮನೆ ವಂದಿಸಿದರು.