ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ದೈವಜ್ಞರ ಹಾಗೂ ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದ ಪ್ರಕಾರ ದೇವಸ್ಥಾನದ ಪುನರ್ ನಿರ್ಮಾಣ ಹಾಗೂ ಬ್ರಹ್ಮಕಲಶ ನಡೆಸುವ ಬಗ್ಗೆ ಮಾ.16 ರಂದು ಶ್ರೀ ಕ್ಷೇತ್ರದ ಆಡಳಿತ ಮೋಕ್ತೇಸರ ರಮೇಶ್ ರೈ ಮಿಶನ್ ಮೂಲೆರವರ ಅಧ್ಯಕ್ಷತೆಯಲ್ಲಿ ಭಕ್ತರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಏಪ್ರಿಲ್ 21 ರಂದು ಶ್ರೀ ಕ್ಷೇತ್ರದಲ್ಲಿ ಅನುಜ್ಞಾ ಕಳಸ, ಪ್ರತಿಷ್ಠೆ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುವುದು. ದೇವಸ್ಥಾನದ ಪುನರ್ ನಿರ್ಮಾಣ ಹಿನ್ನೆಲೆಯಾಗಿ ಶ್ರೀ ಕ್ಷೇತ್ರದಲ್ಲಿನ ಶ್ರೀ ನಾಗನ ಕಟ್ಟೆಯನ್ನು ಮಿಶನ್ ಮೂಲೆಯಲ್ಲಿ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗುವುದು ಜೊತೆಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ದೇವಸ್ಥಾನದ ಸಂಬಂಧಪಟ್ಟ ಹತ್ತಿರದ ಮೊಟ್ಟೆತ್ತಡ್ಕ(ಎರಡು ವಿಭಾಗ), ಆಶ್ರಯಕಾಲೋನಿ, ಸಂಪ್ಯ, ಅಮ್ಮುಂಜ, ಮುಕ್ರಂಪಾಡಿ, ಕೆಮ್ಮಿಂಜೆ ಬೈಲು, ಗೋಲೆಕ್ಸ್ ನೈತಾಡಿ, ಪಂಜಳ, ಇಡಬೆಟ್ಟು, ಸಿಂಹವನ ಪಂಜಳ ಹೀಗೆ ಪ್ರದೇಶಾವಾರು ಸಮಿತಿಯನ್ನು ರಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ಶ್ರೀ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಭಕ್ತಾಭಿಮಾನಿಗಳು ಕರಸೇವೆಯ ಮೂಲಕ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆರವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಲೆಕ್ಕ ಪರಿಶೋಧಕ ವಿಶ್ವನಾಥ ರೈ ಮಿಶನ್ ಮೂಲೆ, ಕಾರ್ಯದರ್ಶಿ ಕೆ.ಬಿ ಶೇಖರ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಸತೀಶ್ ಎಂ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ನಗರಸಭಾ ಸದಸ್ಯ ರಮೇಶ್ ರೈ ಸಹಿತ ನೂರಾರು ಭಕ್ತಾದಿಗಳು ಹಾಜರಿದ್ದು ದೇವಸ್ಥಾನದ ಪುನಃ ನಿರ್ಮಾಣದ ಕುರಿತು ಸಮರ್ಪಕ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.