ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘ, ಮಹಿಳಾ ಸಂಘದ ಮಹಾಸಭೆ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಮಹಾ ಸಭೆಯು ಮಾ.15ರಂದು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಭಾಸ್ಕರ್ ಬಾರ್ಯರ ಅಧ್ಯಕ್ಷತೆ ನಡೆಯಿತು.


ಉಭಯ ಸಂಘದ ಅಧ್ಯಕ್ಷರುಗಳಾದ ಭಾಸ್ಕರ್ ಬಾರ್ಯ ಹಾಗು ಪ್ರೇಮಲತಾ ಟಿ ರಾವ್ ಅವರು ಮುಂದೆಯೂ ಎಲ್ಲರ ಸಹಕಾರ ಕೋರಿದರು. ಸಂಘದ ಉಪಾಧ್ಯಕ್ಷರಾದ ಗುಂಡ್ಯಡ್ಕ ಈಶ್ವರ ಭಟ್ ಹಾಗು ಗುಡ್ಡಪ್ಪ ಬಲ್ಯ ರು ಸಂಘ ಚಟುವಟಿಕೆಗಳ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಸವಣೂರು ರವರು ಹಾಗು ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲು ರವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಸಭೆಮುಂದಿಟ್ಟರು. ಭಾರತೀ ರೈ ಪ್ರಾರ್ಥಿಸಿದರು. ಸತೀಶ್ ಇರ್ದೆ ಸ್ವಾಗತಿಸಿದರು. ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ಸಭೆಯಲ್ಲಿ ಸತೀಶ್ ಕುಮಾರ್ ಎಂಕಣ್ಣಮೂಲೆ , ವಸಂತ ಆಚಾರ್ಯ, ಶರಣ್ಯ ನೇತ್ರಕೆರೆ , ಕೆ ಶ್ಯಾಮಲ, ವೇಣುಗೋಪಾಲ ಭಟ್ ಮಾಂಬಾಡಿ, ಗೌರವ ಕಾರ್ಯದರ್ಶಿ ಟಿ ರಂಗನಾಥ ರಾವ್, ರಾಜ್ ಗೋಪಾಲ್ ಭಟ್ ಬನ್ನೂರು, ಮುರಳೀಧರ ಕಲ್ಲೂರಾಯ , ಲಕ್ಷ್ಮೀನಾರಾಯಣ ಭಟ್ ಬಟ್ಯ ಮೂಲೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ” ಕರ್ಣಾರ್ಜುನ ” ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here