ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ಮಹಿಳಾ ದಿನಾಚರಣೆ

0

ನೆಲ್ಯಾಡಿ: ಇಲ್ಲಿನ ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.
ಪುತ್ತೂರು ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ವೇದಾವತಿ ರಾಜೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಕೇವಲ ಮನೆಯ ಗಡಿಯಲ್ಲಿರದೇ, ಸಮಾಜದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮೂಲಕ ಗುರುತಿಸಿಕೊಳ್ಳಬೇಕು. ಮಹಿಳಾ ಸಹಕಾರಿ ಸಂಘಗಳು ಸರಿಯಾದ ಯೋಜನೆ ಮತ್ತು ಆಡಳಿತದೊಂದಿಗೆ ಉತ್ತಮ ಲಾಭಾಂಶದೊಂದಿಗೆ ಯಶಸ್ವಿಯಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ಎಂದು ಹೇಳಿದರು. ಮಹಿಳೆಯರಿಗೆ ಸರಕಾರ ಶೇ.33ರಷ್ಟು ಮೀಸಲಾತಿ ನೀಡಿದೆ. ಆದರೆ ಈ ಮೀಸಲಾತಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಮಹಿಳೆಯರು ಕುಟುಂಬದಲ್ಲಿ ತಾಯಿ, ಮಗಳು, ಹೆಂಡತಿ, ಅಜ್ಜಿ ಹೀಗೆ ಹಲವಾರು ಹುದ್ದೆಗಳನ್ನು ನಿಭಾಯಿಸುತ್ತಾರೆ. ಅವರ ಹಕ್ಕುಗಳು ಮತ್ತು ಅವಕಾಶಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕಿಯರಾದ ವಿನುತ, ಮೈತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವ್ಯ ಪ್ರಾರ್ಥಿಸಿದರು. ಶ್ವೇತ ಸ್ವಾಗತಿಸಿದರು, ರಶ್ಮಿತಾ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರು, ಕಚೇರಿ ಸಿಬ್ಬಂದಿಗಳು, ಸಂಘದ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.


ಚಿನ್ನದ ಬೆಲೆ ಏರಿಕೆಗೆ ವಿರೋಧ:
ಚಿನ್ನದ ಬೆಲೆ ಇಳಿಸುವಂತೆ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರು ಭಿತ್ತಿಪತ್ರ ಹಿಡಿದು ಆಗ್ರಹಿಸಿದರು. ಚಿನ್ನದ ಬೆಲೆ ಇಳಿಸಿ, ಚಿನ್ನದ ತೆರಿಗೆ ಇಳಿಸಿ, ಹೆಣ್ಣು ಮಕ್ಕಳ ಪೋಷಕರ ಕಣ್ಣೀರು ಒರೆಸಿ ಮುಂತಾದ ಭಿತ್ತಿಪತ್ರಗಳನ್ನು ಮಹಿಳೆಯರು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here