ಪುತ್ತೂರು: ನೆ.ಮುಡ್ನೂರು ಗ್ರಾ.ಪಂ 2024-25ನೇ ಸಾಲಿನ ವಿಶೇಷ ಚೇತನರ ಗ್ರಾಮ ಸಭೆ ಮಾ.13ರಂದು ಗ್ರಾ.ಪಂನಲ್ಲಿ ನಡೆಯಿತು.
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ಇಬ್ರಾಹಿಂ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಿತ್ ಭಟ್, ಗ್ರಾ.ಪಂ ಪಿಡಿಓ ವಿದ್ಯಾಧರ ಕೆ.ಎನ್, ವಿಕಲ ಚೇತನರ ನೋಡೆಲ್ ಅಧಿಕಾರಿ ವನಿತಾ ಉಪಸ್ಥಿತರಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ಪುತ್ತೂರು ತಾ.ಪಂ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ರವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು.
ವಿಕಲ ಚೇತನರಿಗೆ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ವಿಕಲ ಚೇತನರಿಗೇ ಶೇ.50ರಷ್ಟು ರಿಯಾಯಿತಿ ದೊರೆಯುವ ಬಗ್ಗೆ ಮಾಹಿತಿ ನೀಡಿದರು. 2016 ವಿಕಲ ಅದಿನಿಯಮ ಕಾಯ್ದೆ ಪ್ರಕಾರ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯಬೇಕು. ವಿಕಲ ಚೇತನರ 21 ವಿಧದ ವಿಕಲತೆಯ ಬಗ್ಗೆ 2016 ವಿಕಲ ಚೇತನರ ಅಧಿನಿಯಮ ಬಗ್ಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಬಗ್ಗೆ 4 ವಿಧದ ಆರೈಕೆದಾರರ ಪ್ರೋತ್ಸಾಹಧನ ಬಗ್ಗೆ ಹಿರಿಯ ನಾಗರಿಕರ ಕಾಯ್ದೆ, ಹಿರಿಯ ನಾಗರಿಕರ ಗುರುತು ಚೀಟಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಈಶ್ವರಮಂಗಲ ಪ್ರಾ.ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀರವರು ವಿಕಲ ಚೇತನರ ಹಾಗೂ ಎಂಡೋ ಪೀಡಿತರ ಆರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಪಿ. ಬಾಲಕೃಷ್ಣ ಪಾಟಾಳಿ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳು ಸಹಕಾರ ನೀಡಿದರು. ಪಿಡಿಓ ವಿದ್ಯಾಧರ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು.